ಬೆಳಗಾವಿ: ಘಟಪ್ರಭಾ ನದಿಯಲ್ಲಿ ರವಿವಾರ ಮೀನು ಹಿಡಿಯಲು ಹೋಗಿ ತಂದೆ ಮಕ್ಕಳ ನೀರು ಪಾಲಾಗಿದ್ದ ಘಟನೆ ವರದಿಯಾಗಿತ್ತು.
ಹುಕ್ಕೇರಿ ತಾಲೂಕಿನ ಬೆನಕನಹೊಳಿ ಬಳಿ ಘಟಪ್ರಭಾ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ, ತಂದೆ-ಮಕ್ಕಳು, ರಾಮ ಅಂಬಲಿ ತಂದೆ (49), ಮಕ್ಕಳು ರಮೇಶ (14), ಯಲ್ಲಪ್ಪ (12) ನೀರು ಪಾಲಾದ ದುರ್ದೈವಿಗಳು.
ಇವರ ಶವ ಶೋಧ ಕಾರ್ಯಚರಣೆ ನಿನ್ನೆಯಿಂದ ನಡೆದಿತ್ತು. ಸದ್ಯ ಇಂದು ಸಂಜೆ 2 ಶವ ಪತ್ತೆಯಾಗಿದ್ದು, 3ನೆ ಶವದ ಶೋಧ ಕಾರ್ಯ ಮುಂದುವರಿದಿದೆ.