ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನಸ್೯ಗೆ ಪ್ರೀತಿಸುವಂತೆ ಕಾಡುತ್ತಿದ್ದ ಪಾಗಲ್ ಪ್ರೇಮಿಯೋರ್ವ ಹೆಲ್ಮೆಟ್ ಹಾಗೂ ಕೊಯ್ತಾನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನರ್ಸಗೆ ಪ್ರೀತಿಸುವಂತೆ ಪೀಡಿಸಿಸುತ್ತಿದ್ದ ಪಾಗಲ್ ಪ್ರೇಮಿಯಿಂದ ಆಸ್ಪತ್ರೆಗೆ ನುಗ್ಗಿ ನರ್ಸ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಕೂದಲೆಳೆ ಅಂತರದಲ್ಲಿ ನಸ್೯ ಬಚಾವ ಆಗಿದ್ದಾಳೆ.
ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಘಟನೆ ಇದಾಗಿದ್ದು, ಕೈ ಚೀಲದಲ್ಲಿ ತೆಗೆದುಕೊಂಡು ಬಂದಿದ್ದ ಕೊಯ್ತಾದಿಂದ ಏಕಾಏಕಿ ಹಲ್ಲೆ ಮಾಡಲು ಪ್ರಾರಂಭಿಸಿದ ಪಾಗಲ್ ಪ್ರೇಮಿ ಆಸ್ಪತ್ರೆಯ ಕೌಂಟರ್ ಬಳಿಯೇ ನರ್ಸ್ ಗಾಗಿ ಕಾದು ಅಟ್ಯಾಕ್ ಮಾಡಿದ್ದಾನೆ. ಪಾಗಲ್ ಪ್ರೇಮಿ ಅಟ್ಯಾಕ್ ಮಾಡಿ ಅಟ್ಟಹಾಸ ಮೆರೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕೊಯ್ತಾ ಬೀಸುತ್ತಿದ್ದಂತೆ ಪ್ರಾಣ ಪಣಕ್ಕಿಟ್ಟು ಹೋರಾಟ ಮಾಡಿದ್ದಾರೆ.
ಪಾಗಲ್ ಪ್ರೇಮಿ ಪ್ರಕಾಶ್ ಜಾಧವ್ ಎಂಬಾತನಿಂದಲೇ ಕೃತ್ಯ ನಡೆದಿದ್ದು, ನರ್ಸ್ ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಾಲೋನಿಯಲ್ಲಿ ವಾಸವಿರುವ ಪ್ರಕಾಶ್ ನರ್ಸ್ ಗೆ ನಿತ್ಯ ಹಿಂಬಾಲಿಸುವುದು, ಮದುವೆ ಆಗುವಂತೆ ಪೀಡಿಸುತ್ತಿದ್ದ. ಕೆಲ ದಿನಗಳ ಹಿಂದೆ ಕುಟುಂಬಸ್ಥರನ್ನ ಕರೆದುಕೊಂಡು ನರ್ಸ್ ಮನೆಗೆ ಹೋಗಿದ್ದ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ನರ್ಸ್ ಕುಟುಂಬಸ್ಥರು. ಇದಾದ ಬಳಿಕವೂ ಮತ್ತೆ ಮದುವೆ ಆಗುವಂತೆ ಬೆನ್ನು ಬಿದ್ದಿದ್ದ. ನರ್ಸ್ ಸ್ಪಂದನೆ ಮಾಡದಿದ್ದಾಗ ಆಸ್ಪತ್ರೆಗೆ ನುಗ್ಗಿ ಕೊಯ್ತಾದಿಂದ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಪಾಗಲ್ ಪ್ರೇಮಿಯ ಅಟ್ಟಹಾಸಕ್ಕೆ ಬೆಚ್ಚಿ ಬಿದ್ದು ಓಡಿ ಹೋದ ರೋಗಿಗಳು.
ಕೊನೆವರೆಗೂ ಆತನೊಂದಿಗೆ ಹೋರಾಟ ಮಾಡಿ ನರ್ಸ ಜೀವ ಉಳಿಸಿಕೊಂಡಿದ್ದಾಳೆ. ಅ.30ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು. ಆರೋಪಿಯನ್ನ ಹೊಡೆದು ಕೂಡಲೇ ಬಂಧಿಸಿದ್ದಾರೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.