ಅಪರಿಚಿತ ಶವ ಪತ್ತೆ
ಬೆಳಗಾವಿ ಡಿ.೧೬ (ಕರ್ನಾಟಕ ವಾರ್ತೆ): ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮ ಹಾದಿಯಲ್ಲಿರುವ ಘಟಪ್ರಭಾ ನದಿಯ ನೀರಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಸಂಜು ಬಸವಣ್ಣಿ ನಾಯಿಕ ಅವರು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅಪರಿಚಿತ ವ್ಯಕ್ತಿಯ ವಿವರ: ಅಂದಾಜು ೪೦ ರಿಂದ ೪೫ ವಯಸ್ಸು, ೫’೫ ಪೂಟ್ ಎತ್ತರ, ಗೋಧಿಗೆಂಪು ಮೈಬಣ್ಣ, ದುಂಡು ಮುಖ, ಸಣ್ಣದಾದ ಮೂಗು, ಸಾಧಾರಣ ಮೈಕಟ್ಟು, ಮೈಮೇಲೆ ನೀಲಿ ಬಣ್ಣದ ಶರ್ಟ ಮತ್ತು ನಾಶಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಅಪರಿಚಿತ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಬೆಳಗಾವಿ ಎಸ್.ಪಿ ಅವರ ದೂರವಾಣಿ. ೦೮೩೧-೨೪೦೫೨೦೪, ಗೋಕಾಕ ವಿಭಾಗದ ಡಿ.ಎಸ್.ಪಿ ದೂರವಾಣಿ. ೦೮೩೩೨೨೨೩೩೯, ಯಮಕನಮರಡಿ ಪೊಲೀಸ್ ಠಾಣೆ ದೂರವಾಣಿ. ೦೮೩೩೩೨೭೬೩೩೩, ಪೊಲೀಸ್ ಕಂಟ್ರೋಲ್ ರೂಂ. ದೂರವಾಣಿ. ೦೮೩೧೨೪೦೫೨೩೧ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಯಮಕನಮರಡಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.