ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ ರವಿ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ ಘಟನೆ ಆಗಿ ಹೋಗಿದೆ, ಮತ್ತೆ ಮುಂದುವರಿಸುವದರಲ್ಲಿ ಅರ್ಥ ಇಲ್ಲ. ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಚ್ಛರಿಯ ಹೇಳಿಕೆ
ದೇಶದಲ್ಲಿ ಇಂಥ ಘಟನೆಗಳು ಹೊಸದಲ್ಲ, ಸಂಸತ್ತು ವಿಧಾನಸಭೆಯಲ್ಲಿ ನಡೆದಿವೆ. ಕ್ಷಮೆ ಕೇಳಿದ ಬಳಿಕ ಮುಗಿದು ಹೋಗಿವೆ. ಈಗಲೂ ಮುಗಿಸೋದು ಒಳ್ಳೆಯದು ಸಾರ್ವಜನಿಕವಾಗಿ ಈ ಪ್ರಕರಣ ಮುಂದುವರೆಸುವುದು ಅನವಶ್ಯಕ ಎಂದ ಸತೀಶ್ ಜಾರಕಿಹೊಳಿ
ನನ್ನನ್ನು ಪೊಲೀಸರು ಎನ್‌ಕೌಂಟರ್ ಮಾಡೋ ಸಂಚು ರೂಪಿಸಿದ್ರು ಎಂಬ ಸಿ.ಟಿ ರವಿ ಆರೋಪ ವಿಚಾರ ಸಿ.ಟಿ ರವಿ ಓರ್ವ ಶಾಸಕ, ಅವರನ್ನು ಹೇಗೆ ಎನ್‌ಕೌಂಟರ್ ಮಾಡಲು ಸಾಧ್ಯ. ಸಿ.ಟಿ ರವಿಗೆ ತೊಂದರೆ ಕೊಡಬೇಕು ಎಂದು ನಾವು ಠಾಣೆಯಿಂದ ಠಾಣೆಗೆ ಸುತ್ತಾಡಿಸಿಲ್ಲ
ಹೋದ ಎಲ್ಲ ಕಡೆಯೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಲು ಶುರುಮಾಡಿದ್ರು. ಈ ಕಾರಣಕ್ಕೆ ಠಾಣೆಯಿಂದ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಸಮರ್ಥಿಸಿಕೊಂಡ ಸತೀಶ್ ಸಿ.ಟಿ ರವಿ ಅವರೇ ನಾನು ಆ ಪದ ಬಳಸಿಲ್ಲ ಎಂದು ಹೇಳಿದ್ದಾರೆ. ಅವರೇ ಹಾಗೇ ಹೇಳಿದ್ರೆ ಈ ಪ್ರಕರಣ ಮುಂದುವರಿಸುವುದರಲ್ಲಿ ಅರ್ಥ ಇಲ್ಲ ಎಂದು ಹೇಳಿದ್ದಾರೆ.