ಬೆಳಗಾವಿ: ನಗರದ ಸರ್ಕಾರಿ ಸರ್ದಾರ್ ಪ್ರೌಢ ಶಾಲೆಯಲ್ಲಿ NSQF ಯೋಜನೆಯ ಅಡಿಯಲ್ಲಿ ” ನನ್ನ ವೃತ್ತಿ ನನ್ನ ಆಯ್ಕೆ” ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಿಮ್ಮ ಇಷ್ಟದ ಕ್ಷೇತ್ರದಲ್ಲಿ ನೀವು ಸಾಧನೆ ಮಾಡಲು ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ. ಎಸ್ ಎಸ್ ಎಲ್ ಸಿ ನಂತರ ಇರುವ ಹಲವಾರು ಅವಕಾಶಗಳ ಬಗ್ಗೆ ನಿಮಗೆ ಸೂಕ್ತ ಮಾರ್ಗದರ್ಶನ ನೀಡಲು ಯೋಜನೆ ರೂಪಿಸಲಾಗಿದೆ.ಮತ್ತು ಈ ಕುರಿತು ಮಾಹಿತಿಯನ್ನು ಒಳಗೊಂಡ ಪುಸ್ತಕವನ್ನು ವಿತರಿಸಲಾಗಿದ್ದು ಇದರ ಸದುಪಯೋಗ ಪಡೆಯಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ಧ ಉಪಪ್ರಾಂಶುಪಾಲರಾದ ಶ್ರೀ ಎಸ್.ಎಸ್ ಹಾದಿಮನಿಯವರು ನನ್ನ ವೃತ್ತಿ ನನ್ನ ಆಯ್ಕೆ ಉತ್ತಮ ಕಾರ್ಯಕ್ರಮ ಎಷ್ಟೋ ಮಕ್ಕಳಿಗೆ ಹತ್ತನೆಯ ತರಗತಿಯ ನಂತರ ಯಾವ ಕೋರ್ಸ ಆಯ್ಕೆಮಾಡಿಕೊಳ್ಳಬೇಕೆಂಬ ಸೂಕ್ತ ಮಾರ್ಗದರ್ಶನ ಇರಲಿಲ್ಲ. ಆದರೆ ಈ ಕಾರ್ಯಕ್ರಮ ಅದೆಷ್ಟೋ ಬಡ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ದಾರಿದೀಪ ಎಂದರು.
ಕಾರ್ಯಕ್ರಮವನ್ನು ರವಿ ಹಲಕರ್ಣಿ ಸ್ವಾಗತಿಸಿ ನಿರೂಪಿಸಿದರೆ ವಿದ್ಯಾಶ್ರೀ ಲೋಖಂಡೆ ವಂದಿಸಿದರು.ಕಾರ್ಯಕ್ರಮದಲ್ಲಿ ಶ್ರೀ ಅಲ್ತಾಫ ಜಹಾಂಗೀರ್, ರಂಜಿತ್ ಚೌಗಲೆ,ಶಿವಾನಂದ ಮರಬಾಶೆಟ್ಟಿ,ಮಾಸ್ತಿಹೋಳಿ ಬಡಿಗೇರ ,ಶ್ರೀಮತಿ ಮೇಘಾ ಶೆಟ್ಟೆ ಮೆಹರವಾಡೆ,ಶಿವಣ್ಣವರ,ಬರಗೇರಿ,ಮಾನೂರ,ಕುರಗುಂದ,ಗಜೇಂದ್ರಗಡ,ಶಿರೋಳ ಮುಂತಾದವರು ಉಪಸ್ಥಿತರಿದ್ದರು. ಮಕ್ಕಳಿಗೆ ನನ್ನ ವೃತ್ತಿ ನನ ಆಯ್ಕೆ ಪುಸ್ತಕ ವಿತರಿಸಲಾಯಿತು.