ಉತ್ತರ ಕನ್ನಡ: ಜಿಲ್ಲೆಯ ಸಿದ್ದಾಪುರ ಪಟ್ಟಣದ ಬಸವಣ್ಣ ಗಲ್ಲಿಯಲ್ಲಿ ಹತ್ತು ಸಾವಿರ ರೂಪಾಯಿ ಹಣಕ್ಕಾಗಿ ಮನೆಗೆ ನುಗ್ಗಿ ವೃದ್ದೆಯ ಕೊಲೆ ನಡೆದಿದೆ. ಎರಡು ದಿನಗಳ ಬಳಿಕ ಬೆಳಕಿಗೆ ಬಂದ ವೃದ್ದೆಯ ಕೊಲೆಯ ಸುದ್ದಿ.
ಸಿದ್ದಾಪುರದ ಬಸವಣ್ಣಗಲ್ಲಿ ನಿವಾಸಿ ಗೀತಾ ಹೂಂಡೆಕರ ಕೊಲೆಯಾದ ದುರ್ದೈವಿ. ಸಹಕಾರಿ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗೀತಾ ಹೂಂಡೆಕರ್ ನಿತ್ಯ ಐದರಿಂದ ಹತ್ತು ಸಾವಿರ ರೂಪಾಯಿ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದಳು.
72 ವರ್ಷದ ಗೀತಾಗೆ ಇಬ್ಬರು ಹೆಣ್ಮಕ್ಕಳ ಇದ್ದು, ಇಬ್ಬರ ಮದುವೆ ಆಗಿದೆ ಪತಿ ಸಾವನಪ್ಪಿರುವ ಹಿನ್ನೆಲೆ ಕೆಲವು ವರ್ಷಗಳಿಂದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು ಸೋಮವಾರ ರಾತ್ರಿ ಮನೆಯ ಒಳಗೆ ಹೋದವಳು ಹೊರಗೆ ಬಂದಿರಲಿಲ್ಲ.
ಇಂದು ಅಕ್ಕ ಪಕ್ಕದ ಮನೆಯವರಿಗೆ ಅನುಮಾನ ಬಂದು ಮಗಳಿಗೆ ತಿಳಿಸಿದ್ರು ಮಗಳು ಮತ್ತು ಅಳಿಯ ಬಂದು ಮನೆಬಾಗಿಲು ಒಡೆದು ನೋಡಿದಾಗ ಕೊಲೆಯ ಸುದ್ದಿಯ ಬೆಳಕಿಗೆ ಬಂದಿದೆ. ರಾತ್ರಿ ಹೊತ್ತು ಬಾತ್ ರೂಂ ಮೆಲ್ಚಾವಣಿಯಿಂದ ಮನೆಗೆ ನುಗ್ಗಿದ ದುಷ್ಕರ್ಮಿಗಳು
72 ವಯಸ್ಸಿನ ಗೀತಾಳ ಕತ್ತು ಹಿಚುಕಿ ಕೊಲೆ ಮಾಡಿ ಹಣ ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಪಿಗ್ಮಿ ಸಂಗ್ರಹ ಮಾಡುತ್ತಿದ್ದ ಬ್ಯಾಗ್ ನಲ್ಲಿದ್ದ ಹಣವನ್ನೆಲ್ಲ ಕದ್ದು ಒಯ್ದ ದುಷ್ಕರ್ಮಿಗಳು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.