Live Stream

[ytplayer id=’22727′]

| Latest Version 8.0.1 |

Local NewsState News

ವೃದ್ಧಾಶ್ರಮದ ಹಿರಿಯ ನಾಗರಿಕರನ್ನು ಮನರಂಜಿಸಿದ ಗಿರಿನಂದಿ ತರಂಗಿಣಿ ತಂಡ

ವೃದ್ಧಾಶ್ರಮದ ಹಿರಿಯ ನಾಗರಿಕರನ್ನು ಮನರಂಜಿಸಿದ ಗಿರಿನಂದಿ ತರಂಗಿಣಿ ತಂಡ

ಬೆಳಗಾವಿ: ನಗರದ ದೇವರಾಜ ಅರಸ್ ಬಡಾವಣೆಯಲ್ಲಿರುವ ನಾಗನೂರು ಶ್ರೀ ಶಿವಬಸವೇಶ್ವರ ಟ್ರಸ್ಟ ವೃದ್ದಾಶ್ರಮದಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಬೆಳಗಾವಿ ಸಂಗೀತ ಆಸಕ್ತರು ಕಟ್ಟಿಕೊಂಡ ಗಿರಿನಂದಿ ತರಂಗಿಣಿ ತಂಡದವರಿAದ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಿತು. ತಂಡದ ಸದಸ್ಯರಾದ ಶ್ರೀಮತಿ ಸುಜಾತಾ ವಸ್ತçದ ಕಾರ್ಯಕ್ರಮ ಉದ್ಘಾಟಿಸಿ ಆಶ್ರಮಗಳಲ್ಲಿ ವಾಸವಾಗಿರುವ ಹಿರಿಯ ನಾಗರಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಂಗೀತವು ಪ್ರಮುಖ ಪಾತ್ರವಹಿಸುತ್ತದೆ. ನಿಮ್ಮ ಖಿನ್ನತೆ, ಒತ್ತಡ, ಆತಂಕವನ್ನು ದೂರ ಮಾಡಲು ಔಷಧಿಯಂತೆ ರ‍್ಯ ರ‍್ವಹಿಸುತ್ತದೆ. ಸಂಗೀತವು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಇದು ಮೆದುಳಿಗೆ ಬಲವಾದ ಪ್ರಚೋದನೆಯನ್ನು ನೀಡುತ್ತದೆ ಅದು ನೋವು ರ‍್ವಹಣೆಗೆ ಸಹಾಯ ಮಾಡುತ್ತದೆ.

ಆ ಕಾರಣಕ್ಕೆ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರ ನೋವನ್ನು ಮರೆಸುವ ನಿಟ್ಟಿನಲ್ಲಿ ಸಂಗೀತ ಸಂಜೆ ಆಯೋಜಿಸಲಾಗಿದೆ ಎಂದರು. ತಂಡದ ಸದಸ್ಯರಾದ ಶ್ರೀಮತಿ ರಾಜಶ್ರೀ ಮೆನಪ್ಪಗೋಳ ಹಾಗೂ ವಿಶ್ವನಾಥ ವಾವರೆ ಸಂಗೀತ ಸಂಜೆ ನಡೆಸಿಕೊಟ್ಟರು. ವೃದ್ದಾಶ್ರಮದ ಸಂಯೋಜಕರಾದ ಎಂ.ಎಸ್.ಚೌಗಲಾ, ಶ್ರೀಮತಿ ವೈಜಯಂತಿ ಚೌಗಲಾ, ವ್ಯವಸ್ಥಾಪಕರಾದ ಶ್ರೀಮತಿ ಸುಗಂಧಾ ಅಲ್ಲಟ್ಟಿ, ಶ್ರೀಮತಿ ಜಾನಕಿ , ಪ್ರಾಚಾರ್ಯ ಕಿರಣ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";