ಹುಣಸೂರು: ತಾಲೂಕಿನ ಏಕಲ್ ಗ್ರಾಮೋಥಾನ್ ಫೌಂಡೇಶನ್ ಗದ್ದಿಗೆ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರದ ವತಿಯಿಂದ ದಾನಿಗಳ ನೆರವಿನಿಂದ ಸಿಂಗರಮಾರನಹಳ್ಳಿಯ ಸ.ಹಿ.ಪ್ರಾ ಶಾಲೆಯ 89 ಮಕ್ಕಳಿಗೆ ಇತ್ತೀಚಿಗೆ ಐಡಿ ಕಾರ್ಡ್ ವಿತರಿಸಲಾಯಿತು.
ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಎಂದು ಬರಿ ಬಾಯಿ ಮಾತಿನ ಮೂಲಕ ಹೇಳುವುದರಿಂದ ಅದರ ಉಳಿವು ಬೆಳವಣಿಗೆ ಆಗುವುದಿಲ್ಲ, ಅದಕ್ಕೆ ಬೇಕಾಗುವಂತಹ ಪೂರಕ ವ್ಯವಸ್ಥೆಯನ್ನು ಮಾಡಬೇಕು, ಇದಕ್ಕಾಗಿ ಹುಣಸೂರು ತಾಲೂಕಿನ ಸಿಂಗರ ಮಾರ್ನಳ್ಳಿ ಹಾಗೂ ಕರಿ ಮುದ್ದಿನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವಂತಹ ಆದಷ್ಟು ಎಲ್ಲಾ ಸರ್ಕಾರಿ ಶಾಲೆಗಳಿಗೆ ಅಗತ್ಯ ಕಲಿಕಾ ಸಾಮಗ್ರಿಗಳನ್ನು ದಾನಿಗಳ ನೆರವಿನಿಂದ ಒದಗಿಸುತ್ತ ಬರುತ್ತಿದೇವೆ.
ಈ ಸಂದರ್ಭದಲ್ಲಿ ಏಕಲ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕುಂಟೆ ಗೌಡ್ರು ಶಾಲಾ ಮಕ್ಕಳನ್ನು ಉದ್ದೇಶಿಸಿ ಮಕ್ಕಳಿಗೆ ಕಲಿಕೆಯ ಪೂರಕ ವಿಷಯಗಳ ಬಗ್ಗೆ ತಿಳಿಸಿದರು. ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ಸ್ಟೇಟ್ ಕೋಆರ್ಡಿನೇಟರ್ ಗೋವಿತ್ ಕಿರಣ್ ಮಾತನಾಡಿ, ಏಕಲ ಗ್ರಾಮೋತ್ತನ್ ಫೌಂಡೇಶನ್ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಹಾಗೂ ಕೌಶಲ್ಯ ತರಬೇತಿಯ ಬಗ್ಗೆ ಮಾಹಿತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಏಕಲ ಶಿಕ್ಷಕರು, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಮಕ್ಕಳು ಹಾಗೂ ಹಿರಿಯರು ಉಪಸ್ಥಿತರಿದ್ದರು.