ಬೆಳಗಾವಿ: ಇತ್ತೀಚಿಗೆ ಬೆಂಗಳೂರಿನ ವಾಗ್ದೇವಿ ವಿಲಾಸ ಅಂತರಾಷ್ಟ್ರೀಯ ಶಾಲೆಯಲ್ಲಿ ಜರುಗಿದ ಇಂಡಿಯನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಪೇರ್ ನಲ್ಲಿ ಬೆಳಗಾವಿಯ ಮಹಿಳಾ ವಿದ್ಯಾಲಯದ ವಿದ್ಯಾರ್ಥಿಗಳಾದ ಓಂಕಾರ ವಿರಕ್ತಮಠ ಹಾಗೂ ಶುಭಂ ಸಾಳುಂಕೆ ಇವರು ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಕೃಷಿ ಕ್ಷೇತ್ರದಲ್ಲಿ ರಾಸಾಯನಿಕ ಸಿಂಪಡಣೆಗಾಗಿ ರೋಬೋಟಿಕ್ ಬಳಕೆ ಕುರಿತು ಮಾದರಿ ಹಾಗೂ ಯೋಜನಾ ವರದಿ ಮಂಡಿಸಿದ್ದರು. ಇವರ ಈ ಸಾಧನೆಗೆ ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾ ಸ್ವಾಮಿಗಳು ಸೇರಿದಂತೆ ಶಾಲೆಯ ಪ್ರಾಚಾರ್ಯ ಹಾಗೂ ಶಿಕ್ಷಕರು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶುಭಂ ಸಾಳುಂಕೆ ಇವರಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.💐🌹