ಬೆಳಗಾವಿ: ನಗರದ ಸುವರ್ಣಸೌಧದ ಪಶ್ಚಿಮ ಧ್ವಾರದ ಬಳಿ, ಸಚಿವ ಭೈರತಿ ಸುರೇಶ್ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಎಸ್ಕಾರ್ಟ್ ವಾಹನ ಸಚಿವ ಭೈರತಿ ಸುರೇಶ್ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಿಂದ ಗಲಿಬಿಲಿಗೊಂಡ ಸಚಿವರು ಎಸ್ಕಾರ್ಟ್ ವಾಹನದ ಚಾಲಕ ಹಾಗೂ ಪೊಲೀಸರಿಗೆ ತರಾಟೆ ತೆಗೆದುಕೊಂಡರು. ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ.