ಉತ್ತರ ಕನ್ನಡ: ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಗರ್ಭ ಧರಿಸಿದಂತಹ ಹಸುವಿನ ತಲೆಕೆಡಿದು ಮಾಂಸ ಕದ್ದು ದುರುಳರು ವಿಕೃತಿ ಮೇರಿದಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಲ್ಲೆಯಲ್ಲಿ ಈ ಒಂದು ಘಟನೆಯಿಂದ ಜನರು ಬೆಚ್ಚಿಬಿದ್ದಿದ್ದಾರೆ. ಇದೆ ವೇಳೆ ಉತ್ತರ ಕನ್ನಡ ಎಸ್ಪಿ ಜತೆ ಗೃಹಸಚಿವ ಪರಮೇಶ್ವರ್ ನಿನ್ನೆ ಪ್ರತ್ಯೇಕ ಸಭೆ ಮಾಡಿದ್ದಾರೆ. ಗೋ ಹತ್ಯೆಯನ್ನ ಸರ್ಕಾರ ಯಾವುದೇ ಕಾರಣಕ್ಕೂ ಬೆಂಬಲಿಸಲ್ಲ. ಗೋ ಹಂತಕರು ಯಾರೇ ಆಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಗೋ ಮಾಂಸ ಸಾಗಾಟದ ಜಾಲ ಇದರೆ ಸಂಪೂರ್ಣ ಕಲೆ ಹಾಕುವಂತೆ ಗೃಹ ಸಚಿವ ಪರಮೇಶ್ವರ್ ಸಭೆಯಲ್ಲಿ ಸೂಚನೆ ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ನಾರಾಯಣ್ ಅವರು, ನಾಲ್ಕು ತಂಡಗಳನ್ನು ರಚಿಸಿ ಗೋ ಹಂತಕರನ್ನು ಬಂಧಿಸಲು ಕಾರ್ಯಚರಣೆ ನಡೆಸಿ ಇದುವರೆಗೂ ಒಟ್ಟು ಐದು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ ಕಳೆದ ಒಂದು ತಿಂಗಳಲ್ಲಿ 15 ಹಸುಗಳು ಕೂಡ ನಾಪತ್ತೆಯಾಗಿರುವ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ ಏನು?
ಕಳೆದ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡ ಗ್ರಾಮದಲ್ಲಿ ಹಸುವಿನ ತಲೆ ಕಡೆದು ದುಷ್ಕರ್ಮಿಗಳು ಮಾಂಸವನ್ನು ಕದ್ದು ಒಯ್ದಿದ್ದರು.ಕೃಷ್ಣ ಆಚಾರಿ ಎಂಬುವವರ ಹಸುವನ್ನು ಮೇಯಲು ಕಾಡಿಗೆ ಬಿಟ್ಟಿದ್ದರು. ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಹುಡಕಾಡಿದರೂ ಪತ್ತೆ ಆಗಿಲಿಲ್ಲ. ಆದರೆ ಮರುದಿನ ಬೆಳಗ್ಗೆ ಮಾಲೀಕರಿಗೆ ಆಘಾತ ಕಾದಿತ್ತು.
ಮನೆಯಿಂದ ಅನತಿ ದೂರದಲ್ಲೇ ಹಸುವಿನ ತಲೆ ಕತ್ತರಿಸಿ ಬಿದ್ದಿತ್ತು. ಹಸುವಿನ ಕಾಲು ಕಾಣಸಿತ್ತು. ದುಷ್ಟರು ಹಸುವಿನ ಮುಂಡ, ಹಸುವಿನ ಹೊಟ್ಟೆಯಲ್ಲಿದ್ದ ಕರುವಿನ ಮಾಂಸವನ್ನ ಹೊತ್ತೊಯ್ದಿದ್ದಾರೆ ಅಂತಾ ಹಸುವಿನ ಮಾಲೀಕರು ಕಣ್ಣೀರು ಹಾಕಿದ್ದರು. ಈ ಘಟನೆಯಿಂದ ರಾಜ್ಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.