Live Stream

[ytplayer id=’22727′]

| Latest Version 8.0.1 |

Local NewsState News

ಅಪರಾಧ ಕೃತ್ಯಗಳು ಆಗದಂತೆ ತತ್ವನಿಷ್ಠರಾಗಿ ಬದುಕಬೇಕು; ಹರೀಶ ಪಾಟೀಲ್

ಅಪರಾಧ ಕೃತ್ಯಗಳು ಆಗದಂತೆ ತತ್ವನಿಷ್ಠರಾಗಿ ಬದುಕಬೇಕು; ಹರೀಶ ಪಾಟೀಲ್

 

ಬೆಳಗಾವಿ: ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಮಜಲಟ್ಟಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕ, ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಪೃಥ್ವಿ ಸದ್ವಿಕಾಸ ಪೌಂಡೇಶನ್, ಚಿಕ್ಕೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಂತಗಿರಿ ವನ ಕೊಥಳಿ ಕುಪ್ಪನವಾಡಿಯಲ್ಲಿ ” ರಾಷ್ಟ್ರೀಯ ಯುವ ದಿನಾಚರಣೆ” ಹಾಗೂ ಯುವ ಸಾಧಕರ ಸತ್ಕಾರ ಸಮಾರಂಭ ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉದ್ಘಾಟನಾ ಪರ ಭಾಷಣ ಮಾಡಿದ ಚಿಕ್ಕೋಡಿಯ ಪ್ರಧಾನ ಹಿರಿಯ ದಿವಾನಿ ನ್ಯಾಯಾಧೀಶರಾದ ಹರೀಶ ರಂಗನಗೌಡ ಪಾಟೀಲ್ ರವರು, ಮನುಷ್ಯ ತನ್ನ ಹಕ್ಕುಗಳನ್ನು ಸಾಧಿಸುವ ಮೊದಲು ತಾನು ನಿರ್ವಹಿಸುವ ಕರ್ತವ್ಯಗಳ ಬಗ್ಗೆ ಮನದಟ್ಟಾಗಬೇಕು. ದೇಶದ ಮುಂದಿನ ಪ್ರಜೆಗಳಾಗುವ ವಿದ್ಯಾರ್ಥಿಗಳು ನ್ಯಾಯ, ಸಮಾನತೆ, ಭ್ರಾತೃತ್ವದಂತಹ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಅಪರಾಧ ಕೃತ್ಯಗಳು ಆಗದಂತೆ ತತ್ವನಿಷ್ಠರಾಗಿ ಬದುಕಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಚಿಕ್ಕೋಡಿಯ ಉಪವಿಭಾಗಾಧಿಕಾರಿಗಳಾದ ಎಸ್.ಎಸ್.ಸಂಪಗಾಮವಿಯವರು ಮಾತನಾಡುತ್ತಾ, ಗುರಿಯಾಧಾರಿತ ಸಾಧನೆಗೆ ಯುವಕರು ಮುಂದಾಗಬೇಕು. ದೇಶಕ್ಕೆ ನಮಗೇನು ನೀಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಸಮರ್ಪಿಸಿದ್ದೇವೆ ಎಂಬುದು ಮುಖ್ಯವಾಗಿರುತ್ತದೆ. ಕೇವಲ ಪಠ್ಯಪೂರಕ ಅಧ್ಯಯನಕ್ಕೆ ವಿದ್ಯಾರ್ಥಿಗಳು ಕೇಂದ್ರಿಕರಿಸದೇ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಬೇಕು. ಅಂದಾಗ. ಸರ್ವೋತೋಮುಖ ಬೆಳವಣಿಗೆ ಕಾಣಲು ಸಾಧ್ಯ ” ಎಂದರು.

ಗೌರವಾನ್ವಿತ ಹೆಚ್ಚುವರಿ ದಿವಾನಿ ನ್ಯಾಯಾಧೀಶರಾದ ಶ್ರೀಮತಿ ಧರಣಿಯವರು ವಿದ್ಯಾರ್ಥಿಗಳಿಗೆ ‘ ಆತ್ಮಹತ್ಯಾ ವಿರೋಧಿ” ಕುರಿತು ಪ್ರತಿಜ್ಞೆ ವಿಧಿ ಬೋಧಿಸಿದರು.

ಕಾಲೇಜಿನಲ್ಲಿ ಕರ್ನಾಟಕ ರಾಜ್ಯಕ್ಕೆ ಕಲಾ ವಿಭಾಗದಲ್ಲಿ ಕ್ರಮವಾಗಿ ಏಳನೇಯ ಮತ್ತು ಏಂಟನೇಯ ಅಗ್ರ ಶ್ರೇಯಾಂಕಿತರಾದ ಕುಮಾರಿ ಆಸ್ಮಾ ಖಾನ ಹಾಗೂ ಸ್ನೇಹಾ ಮಲ್ಲಹೋಳಿ ಹಾಗೂ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಒಂಬತ್ತನೇಯ ಅಗ್ರ ಶ್ರೇಯಾಂಕಿತೆ ಸುಜಾತಾ ಕಳಸನ್ನವರ ಇವರಿಗೆ ಯುವ ಸಾಧಕರ ಸತ್ಕಾರದೊಂದಿಗೆ ತಲಾ 5000 ರೂಗಳ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಕಲ್ಮೇಶ ಕಿವುಡ, ಎಂ.ಬಿ.ಪಾಟೀಲ, ಎಸ್.ಆರ್.ವಾಲಿ, ವಾಯ್.ಟಿ.ತುಂಗಳ, ಆರ್.ಎಂ.ಮಿರ್ಜಿ, ಬಸವರಾಜ ಓ.ಸಿ., ಸುಭಾಷ ಯರನಾಳೆ, ಡಾ.ಮಾಣಿಕ್ಯಾ ಕಬಾಡಗಿ, ಎಂ.ಎಸ್.ಪಾಟೀಲ್, ಮಂಜುನಾಥ ದೊಡಭಂಗಿ, ಮಹೇಶ ಪಾಟೀಲ, ಸಂಜಯ ಪೋತದಾರ, ಅನುರಾಧ ಪಾಟೀಲ, ಗಾಯತ್ರಿ ವಂಟೆನ್ನವರ, ವಿ.ಜಿ.ಮಾದಪ್ಪಗೋಳ, ಎಲ್.ಎಸ್.ವಕನೆ, ಬಿ.ಎಂ.ಗುದಗೆ, ಸುರೇಶ ಪಾಟೀಲ , ಊರಿನ ಗಣ್ಯರಾದ ರುದ್ರಪ್ಪ ಸಂಗಪ್ಪಗೋಳ, ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಹನಮಂತ ಟಕ್ಕನ್ನವರ ಸ್ವಾಗತಿಸಿದರು. ಉಪನ್ಯಾಸಕ ರವೀಂದ್ರ ಕಾಗಲೆ ನಿರೂಪಿಸಿದರು. ರವಿಚಂದ್ರ ಪಾಟೀಲ ವಂದಿಸಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";