Live Stream

[ytplayer id=’22727′]

| Latest Version 8.0.1 |

Local NewsNational NewsState News

ರಸ್ತೆ ಸುರಕ್ಷತಾ ಸಪ್ತಾಹ ವಿವಿಧ ಕಾರ್ಯಕ್ರಮ

ರಸ್ತೆ ಸುರಕ್ಷತಾ ಸಪ್ತಾಹ ವಿವಿಧ ಕಾರ್ಯಕ್ರಮ

 

ಬೆಳಗಾವಿ:  ಏನ್.ಎಚ್.ಆಯ್.ಟಿ ಫೊರಸೈಟ್ ಸೊಸೈಟಿ ನವದೆಹಲಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳವಾರ ದಿನಾಂಕ 28 ರಂದು ರಂಗಧರ್ಶಿನಿ ಕಲಾತಂಡ ಧುಳಗನವಾಡಿ, ಇವರ ಮೂಲಕ ಹತ್ತರಗಿ ಟೋಲ್ ಪ್ಲಾಜಾದಲ್ಲಿ ಬೀದಿ ನಾಟಕ ಜರುಗಲಿದೆ.

ಅದೇ ದಿನ ಮಧ್ಯಾಹ್ನ ನಿಪ್ಪಾಣಿ ತಾಲ್ಲೂಕಿನ ಕೊಗನೋಳಿ ಟೋಲ್ ದಲ್ಲಿ ಬೀದಿ ನಾಟಕ ಪ್ರದರ್ಶನ ಆಯೋಜಿಸಿದೆ. ಬುಧವಾರ ದಿನಾಂಕ 29 ರಂದು ಮುಂಜಾನೆ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನ ಎಚ್.ಡಿ.ಪಿ. ಪ್ರೌಢಶಾಲೆಯಲ್ಲಿ ರ‍್ಯಾಲಿ ಹಾಗೂ ಜಾಗೃತಿ ಕಾರ್ಯಕ್ರಮ ಮಧ್ಯಾಹ್ನ ಹುಕ್ಕೇರಿ ತಾಲೂಕಿನ ಯರನಾಳ ಮತ್ತು ಯರಗಟ್ಟಿ ಗ್ರಾಮದ ಪ್ರೌಢಶಾಲೆಗಳಲ್ಲಿ ಚಿತ್ರ ಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಎನ್.ಎಚ್.ಆಯ್.ಟಿ ಪ್ರಾಜೆಕ್ಟ್ ಮ್ಯಾನೇಜರ್ ಎಮ್.ರವೀಂದ್ರನ್, ಕೆ.ಪಿ.ಎಸ್. ಯರಗಟ್ಟಿ ಪ್ರಾಚಾರ್ಯರಾದ ಕಿರಣ್ ಚೌಗಲಾ, ಎಚ್.ಡಿ.ಪಿ ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಆರ್. ಸರನೋಬತ್, ಜನಪದ ಸಾಹಿತಿಗಳಾದ ಡಾ. ಪ್ರಕಾಶ ಹೊಸಮನಿ ಹಾಗೂ ಶ್ರೀಮತಿ ಸುರೇಖಾ ಪಾಟೀಲ, ಮತ್ತು ಉಪಪ್ರಾಂಶುಪಾಲರಾದ ಶ್ರೀಮತಿ ಎ.ಆರ್.ಮಠಪತಿರವರು ಭಾಗವಹಿಸಲಿದ್ದಾರೆ ಎಂದು ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಗೌರವ ಕಾರ್ಯದರ್ಶಿಯಾಗಿರುವ ಶ್ರೀಮತಿ ವ್ಹಿ.ಎಮ್.ಚೌಗಲಾ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";