ಹುಕ್ಕೇರಿ: ತಾಲೂಕಿನ ದಲಿತರ ಬಹುದಿನಗಳ ಬೇಡಿಕೆ ಇಂದು ಇಡೆರಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್ ಸಿ
ಮಹದೇವಪ್ಪ ಹೇಳಿದರು. ಅವರು ಇಂದು ಹುಕ್ಕೇರಿ ನಗರದ ಕೋರ್ಟ ಸರ್ಕಲ್ ಬಳಿ
ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ರವರ ಪುತ್ಥಳಿ ಅನಾವರಣ ಜರುಗಿಸಿ ಮಾದ್ಯಮಗಳೊಂದಿಗೆ
ಮಾತನಾಡುತ್ತಾ.
ಹುಕ್ಕೇರಿ ತಾಲೂಕಿನ ದಲಿತರ ಬಹುದಿನಗಳ ಬೇಡಿಕೆಯಾದ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣಕ್ಕೆ ಇಂದು ನಾನು ಮತ್ತು ಜಿಲ್ಲೆಯ ಸಚಿವರ, ಶಾಸಕರ ಉಪಸ್ಥಿತಿಯಲ್ಲಿ ಅನಾವರಣ
ಮಾಡಲಾಗಿದೆ ಎಂದರು.
ನಂತರ ಮಾಜಿ ಸಂಸದ ರಮೇಶ ಕತ್ತಿ ಮುಖ್ಯ ದ್ವಾರವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿದರು. ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಅಂಬೇಡ್ಕರ್
ಉದ್ಯಾನವನ ಉದ್ಘಾಟಿಸಿದರೆ ಸತೀಶ ಜಾರಕಿಹೋಳಿ ಮತ್ತು ಎಚ್ ಸಿ ಮಹಾದೇವಪ್ಪ ಬೃಹತ್ ಆಕಾರದ
ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ಹಾರಿಸಿ ಮಾಲಾರ್ಪಣೆ ಮಾಡಿದರು.
ಹುಕ್ಕೇರಿ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಜನೋ ಜನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದ ಒಂದು ಹಬ್ಬದ ವಾತಾವರಣ ಹುಕ್ಕೇರಿಯಲ್ಲಿ ಸೃಷ್ಟಿಯಾಗಿತ್ತು.
ವರದಿ:ಕಲ್ಲಪ್ಪ ಪಾಮನಾಯಿಕ್