ಬೆಳಗಾವಿ: ನಗರದ ಕರಗುಪ್ಪಿ-ಯಲ್ಲಾಪುರದ ನಮ್ಮೂರ ಬಾನುಲಿ ರೇಡಿಯೋ ಕೆಂದ್ರದ ಉಪ ಶಾಖೆಯಾದ ಬೆಳಗಾವಿಯ ರೇಡಿಯೋ ಕೇಂದ್ರದಲ್ಲಿ ಪತಂಜಲಿ ಯೋಗ ಸಮೀತಿಯ ಯುವ ಭಾರತದ ರಾಜ್ಯ ಪ್ರಭಾರಿ ಕಿರಣ ಎಂ. ಅವರು ಸಂದರ್ಶನ ನೀಡಿದರು.
ಈ ಸಂದರ್ಶನದಲ್ಲಿ, ಯುವಕರಿಗಾಗಿ ಯೋಗ ಎಷ್ಟು ಮುಖ್ಯ. ಈಗಿನ ಕಾಲದ ಜನರು ತಮ್ಮ ಬ್ಯುಸಿ ಜೀವನದಲ್ಲಿ ಸಮಯವನ್ನ ತೆಗೆದುಕೊಂಡು ಯೋಗ ಮಾಡಬೇಕು ಎಂದು ಹೇಳಿದರು. ಜೊತೆಗೆ, ಯುವಕರ ದೇಹ ಒಂದು ದೊಡ್ಡ ಖಜಾನೆ ಇದ್ದ ಹಾಗೆ. ಅದು ಯವ್ವನಾವಸ್ಥೆಯಲ್ಲಿಯೇ ನಮಗೆ ಬೆಂಬಲ ನೀಡುತ್ತದೆ. ಆಮೇಲೆ ಶಕ್ತಿ ಕುಂದಿದಾಗ ಚೈತನ್ಯಯುಕ್ತವಾಗಿರಲು ಯುವಾ ಅವಸ್ಥೆಯಲ್ಲಿ ಯೋಗವನ್ನು ಪ್ರತಿಯೊಬ್ಬ ಯುವಕರು ಮಾಡಬೇಕು ಎಂದು ತಿಳಿಸಿದರು. ಯೋಗದಿಂದ ದೇಹ-ದೇಹದಿಂದ ಮನಸ್ಸು-ಮನಸ್ಸಿನಿಂದ ಯೋಚನೆಗಳು ಶುದ್ಧವಾಗುತ್ತವೆ. ಹಾಗಾಗಿ ಎಲ್ಲರೂ ಯೋಗಾಭ್ಯಾಸವನ್ನ ಮಾಡಿ ಹಾಗೂ ದೈನಂದಿನ ಜೀವನನಕ್ಕೆ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಶನವನ್ನು ನಮ್ಮೂರ ಬಾನುಲಿಯ ರೇಡಿಯೋ ಜಾಕಿ ಚೇತನ ಅವರು ಸಂದರ್ಶಿಸಿದರು. ಆರ್ ಜೆ ಮೀರಾ ರವರು ತಾಂತ್ರಿಕ ಬೆಂಬಲ (ಟೆಕ್ನಿಕಲ್ ಸಪೋರ್ಟ್) ನೀಡಿದರು.