ಹಿಡಕಲ್ ಡ್ಯಾಂ: ಮಹಿಳೆಯರು ಅದಮ್ಯವಾದ ಶಕ್ತಿಯನ್ನು ಹೊಂದಿದ್ದಾರೆ. ನಿಸರ್ಗದತ್ತವಾಗಿ ದೈವಿ ಸ್ವರೂಪಿಯಾಗಿರುವ ಮಹಿಳೆಯರು ಛಲವಾದಿಗಳು, ಶಕ್ತಿಸ್ವರೂಪವಾಗಿದ್ದು ಅಸಾಧ್ಯವಾದದನ್ನು ಸಹ ಮನಸ್ಸು ಮಾಡಿದಲ್ಲಿ ಸಾಧ್ಯವಾಗಿಸ ಬಲ್ಲಳು ಎಂದು ಹುಕ್ಕೇರಿ ಹತ್ತರಗಿ ಹರಿಮಂದಿರದ ಪೂಜ್ಯರಾದ ಶ್ರೀ ಆನಂದ ಮಹಾರಾಜರು ಅಭಿಪ್ರಾಯಪಟ್ಟರು.
ಮಹಿಳಾ ಕಲ್ಯಾಣ ಸಂಸ್ಥೆ ಹಾಗೂ ಬೆಂಗಳೂರಿನ ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂದಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಆಯೋಜಿಸಿದ್ದ ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಡನಾಡಿದರು.
ಪೂಜ್ಯರು ಕಾರ್ಯಕ್ರಮದಲ್ಲಿ ಮಾತನಾಡುತ್ತ ದೇಶದಲ್ಲಿ ಮಹಿಳೆಯರ ಸಾಧನೆಗಳು ಎಲ್ಲರಿಗೂ ಸ್ಪೂರ್ತಿಯಾಗಿವೆ. ದೇಶದ ಮೊದಲ ರಾಷ್ಟçಪತಿ ಪ್ರತಿಭಾ ಪಾಟೀಲ, ಪ್ರಧಾನಿ ಇಂದಿರಾ ಗಾಂಧಿ ಮಹಿಳಾ ಸಮುದಾಯಕ್ಕೆ ಮಾದರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೆಚ್ಚು ಬಾರಿ ಬಜೆಟ್ ಮಂಡಿಸಿದ ಮಹಿಳೆ ಎಂದು ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಪಬ್ಲಿಕ್ ಶಾಲೆ ಯರಗಟ್ಟಿಯ ಪಾಚಾರ್ಯ ಕಿರಣ ಚೌಗಲಾ ಮಾತನಾಡಿ ಮಹಿಳೆಯು ಸುಶಿಕ್ಷಿತೆಯಾದರೆ ಕುಟುಂಬ ಸುಧಾರಿಸಬಲ್ಲಳು. ಪರಿಸರ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ವೈಯಕ್ತಿಕ ಸ್ವಚ್ಛತೆ ಮತ್ತು ನೈರ್ಮಲ್ಯ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಮಹಿಳಾ ಕಲ್ಯಾಣ ಸಂಸ್ಥೆ ಮಹಿಳೆಯರಿಗಾಗಿ ಆಯೋಜಿಸುತ್ತಿರುವ ಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕರಗುಪ್ಪಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ದುರದುಂಡಿ ಪಾಟೀಲ ಹಾಗೂ ಬಸ್ಸಾಪೂರ ಪಿ.ಕೆ.ಪಿ.ಎಸ್. ಅಧ್ಯಕ್ಷ ಸಿದ್ದಲಿಂಗ ಸಿದ್ದೇಗೌಡರ ಅವರನ್ನು ಕರ್ನಾಟಕ ಪತ್ರಕರ್ತರ ಸಂಘದ ಪರವಾಗಿ ಸತ್ಕರಿಸಲಾಯಿತು.
ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ. ಸುರೇಖಾ ಪಾಟೀಲ, ಎಂ. ಎಂ ಗಡಗಲಿ, ಬಸವರಾಜ ಮಣ್ಣೀಕೇರಿ, ಸಿದ್ದಪ್ಪ್ ಹಿತ್ತಲಮನಿ ಕಸಗಳ ವಿಲೇವಾರಿ ನವೀಕರಿಸಬಹುದಾದ ಇಂಧನ, ಮಳೆ ನೀರು ಕೊಯ್ಲು, ಘನತ್ಯಾಜ್ಯ ನಿರ್ವಹಣೆ ಕುರಿತು ತರಬೇತಿ ನೀಡಿದರು. ಯಾದಗೂಡ, ಬೆಳವಿ, ಶಿಂಧಿಹಟ್ಟಿ, ಹುಟ್ಟಿ ಆಲೂರು, ಲೇಬರ್ ಕ್ಯಾಂಪ್ ಹಿಡಕಲ್ ಡ್ಯಾಂ ಗ್ರಾಮಗಳ ಸ್ವ-ಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.