ಚಿಕ್ಕೋಡಿ: ತಾಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಡಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಶ್ರೀ ಬಿಲ್ವಾಶ್ರಮ ಜಗದ್ಗುರು ಸಿದ್ದ ಸಂಸ್ಥಾನ ಮಠ ನಿಡಸೋಶಿಯಲ್ಲಿ ವಿದ್ಯಾರ್ಥಿನಿಯರಿಗಾಗಿ “ವನಭೋಜನ,ವ್ಯಕ್ತಿತ್ವ ವಿಕಸನ ಹಾಗೂ ಸ್ನೇಹ ಸಮ್ಮೇಳನ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪಾಠದೊಂದಿಗೆ ಆಟ, ಅಧ್ಯಯನಶೀಲತೆಯಮಹತ್ವ, ಸಹಪಂಕ್ತಿ ಭೋಜನ, ಮನೋರಂಜನೆ ಯಂತಹ ಕಾರ್ಯಕ್ರಮಗಳು ಜರಗಿದವು. ಈ ಕಾರ್ಯಕ್ರಮದಲ್ಲಿ ಯುವ ಧುರೀಣರಾಧ ಶ್ರೀ ರುದ್ರಪ್ಪ ಸಂಗಪ್ಪಗೋಳ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಉಪನ್ಯಾಸಕರಾದ ಶ್ರೀ ವಿಶ್ವನಾಥ್ ಚೌಗಲಾರವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಶ್ರೀ ಹನುಮಂತ್ ಟಕ್ಕನವರ ಇವರು ಪ್ರಾಸ್ತಾವಿಕ ನುಡಿಗಳನ್ನಾ ಡಿದರು.
ವಾಣಿಜ್ಯಶಾಸ್ತ್ರ ವಿಭಾಗದ ಶ್ರೀ ಎಂಎ ಮುಲ್ಲಾ ರವರು ಹಾಗೂ ಅರ್ಥಶಾಸ್ತ್ರ ಉಪನ್ಯಾಸಕರಾದ ಶ್ರೀ ಅಜಿತ್ ಬಸರಗಿ ರವರು ಕಾರ್ಯಕ್ರಮದ ಸಹ ಸಂಯೋಜಕರಾಗಿದ್ದರು. ಶ್ರೀ ಮಲ್ಲಿಕಾರ್ಜುನ್ ಜೋಡಟ್ಟಿ,ಕಲ್ಲಪ್ಪ ಹೇಳವಿ ಸತೀಶ್ ಯಶವಂತ್, ಶ್ರೀ ಮಲ್ಲಿಕಾರ್ಜುನ್ ನಾಯಕ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.