Live Stream

[ytplayer id=’22727′]

| Latest Version 8.0.1 |

Local NewsState News

ಇಂದಿನಿಂದ ಪಂಚ ಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ…!

ಇಂದಿನಿಂದ ಪಂಚ ಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ…!

 

ಯಮಕನಮರಡಿ: ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದಲ್ಲಿ ಫೆ. 3ರಿಂದ 9 ರವರೆಗೆ 1008 ಭಗವಾನ್ ಪಾರ್ಶ್ವನಾಥ ತೀರ್ಥಂಕರ ಜಿನಜಿಂಬದ ಭವ್ಯ ದಿವ್ಯ ಮನೋಹರ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ವಿಶ್ವಶಾಂತಿ ಮಹಾಯುಗ ನಡೆಯುವುದು.
ಎಂದು 1008 ಪಾರ್ಶ್ವನಾಥ ದಿಗಂಬರ ಜೈನ್ ಮಂದಿರ ಟ್ರಸ್ಟ್ ಕಮಿಟಿ ಅಧ್ಯಕ್ಷ ಸಿ ಡಿ ಪಾಟೀಲ್ ಹೇಳಿದರು.

ಯು. ಖಾನಾಪುರದ ಶ್ರೀ ಜೈನ್ ಬಸದಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಧರ್ಮಕೇಸರಿ ಆಚಾರ್ಯ ಶ್ರೀ 108 ಜೀನಸೇನೆ ಮನಿ ಮಹಾರಾಜರು ಹಾಗೂ ನಂದಣಿ ಸಂಸ್ಥಾನಮಠ ಜೀನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

3ರಂದು ಧ್ವಜಾರೋನ ಗರ್ಭ ಕಲ್ಯಾಣ ಪೂರ್ವಾರ್ಧ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಜಾಪ್ಯ,ಸಂಗೀತ, ಆರತಿ ನಡೆಯಲಿದೆ” ಎಂದರು.

4ರಂದು ಬೆಳಗ್ಗೆಯಿಂದ ಗರ್ಭಕಲ್ಯಾಣ ಉತ್ತರಾರ್ಧ

ನವಗ್ರಹ ಶಾಂತಿ ವಿಧಾನ ನಡೆಯುವುದು.

5ರಂದು ಭಗವಂತ ಜನ್ಮ ಕಲ್ಯಾಣಕ, 6ರಂದು ರಾಜಾಭಿಷೇಕ ದೀಕ್ಷಾ ಕಲ್ಯಾಣೀಕ, ಭೋಗದಿಂದ ತಪದ ಕಡೆಗೆ,

7ರಂದು ಕೇವಲಜ್ಞಾನ ಕಲ್ಯಾಣ ಭಗವಂತರ ಆಹಾರ ವಿಧಿ,
ಮೌಂಜಿ ಬಂಧನ ಸಂಸ್ಕಾರ ನಡೆಯುವುದು.

8 ರಂದು ಭವ್ಯ ರಥೋತ್ಸವ,
9ರಂದು ನಿರ್ಮಾಣ ಕಲ್ಯಾಣ(ಶಾಶ್ವತ ಮೋಕ್ಷ ಮಾರ್ಗ) ಶ್ರೀಕಲಿಕುಂಡ ಆರಾಧನಾ ವಿಧಾನ ಹಾಗೂ ಹೆಲಿಕ್ಯಾಪ್ಟರ್ ಮೂಲಕ ಜಿನಮಂದಿರದ ಮೇಲೆ ಪುಷ್ಪಾರ್ಚನೆ ನಡೆಯುತ್ತದೆ. ಎಂದು ಮಾಡಿದರು.

ಸತತ ಏಳು ದಿನವೂ ಇಂದ್ರ- ಇಂದ್ರರಾಣಿಯರನ್ನು ಆನೆ ಮೇಲೆ ಮೆರವಣಿಗೆ ಮುಖಾಂತರ ಪೂಜಾ ಮಂಟಪಕ್ಕೆ ಕರೆತರುತ್ತಿದ್ದರು.
ಉ.ಖಾನಾಪುರದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂಸದೆ ಪ್ರಿಯಾಂಕ ಜಾರಕಿಹೊಳಿ, ಮಾಜಿ ಸಚಿವ ವೀರಕುಮಾರ್ ಪಾಟೀಲ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕತ್ತಿ, ಉತ್ತಮ ಪಾಟೀಲ್ ಆಗಮಿಸುವರು, ಪ್ರತಿದಿನ ಮಧ್ಯಾಹ್ನ ಭೋಜನ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಉಪಾಧ್ಯಕ್ಷ ಹಣಮತಗೌಡ ಪಾಟೀಲ, ಆದಪ್ಪಾ ಪಾಟೀಲ, ದಾದುಗೌಡ ಪಾಟೀಲ, ಶಾಂತುಗೌಡ ಪಾಟೀಲ, ರಾಜು ಅವಟೆ, ಜಿ ಕೆ ಪಾಟೀಲ, ಸೇರಿದಂತೆ ಇನ್ನಿತರರು ಇದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";