ಬೆಳಗಾವಿ: ಹೆಲ್ಮೆಟ್ ಧರಿಸದ ಬೈಕ್ ಸವಾರರಿಗಾಗಿ ಏನೆಲ್ಲ ಜಾಗೃತಿ ಮೂಡಿಸಿ ಸುಸ್ತಾದ ಬೆಳಗಾವಿ ಪೊಲೀಸರು, ಇದೀಗ ವಿನೂತನ ಕ್ರಮ ಕೈಗೊಂಡಿದ್ದಾರೆ.
ಅದು, ಹೆಲ್ಮೆಟ್ ಧರಿಸದವರಿಂದಲೇ ಜಾಗೃತಿ ಅಭಿಯಾನ ಮಾಡಿಸುವುದಾಗಿದೆ. ಹೆಲ್ಮೆಟ್ ಧರಿಸದೇ ಬೈಕ್ ಓಡಿಸುವವರ ಕೈಯಲ್ಲಿಯೇ ಘೋಷ ವಾಕ್ಯಗಳ ಫಲಕ ಕೊಟ್ಟು ಜಾಗೃತಿಗೆ ನಿಲ್ಲಿಸಲಾಗುತ್ತಿದೆ!!
ಕಳೆದ ವಾರ ನಾಲ್ಕಾರು ಪೊಲೀಸ್ ಸಿಬ್ಬಂದಿಗೇ ಹೆಲ್ಮೆಟ್ ಧರಿಸದ್ದರಿಂದ ದಂಡ ವಿಧಿಸಲಾಗಿತ್ತು. ಇದೀಗ, ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಬಂದವರನ್ನು ನಿಲ್ಲಿಸಿ ಅವರ ಕೈಯಲ್ಲಿ, “ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ, ಇಲ್ಲವಾದಲ್ಲಿ ನಮ್ಮ ಹಾಗೆ ಜಾಗೃತಿ ಮೂಡಿಸಬೇಕಾಗುತ್ತದೆ” ಎನ್ನುವ ಫಲಕವನ್ನು ಹಿಡಿದು ನಿಲ್ಲಿಸಲಾಗುತ್ತಿದೆ. ಸದ್ಯ ಪೊಲೀಸರ ನವೀನ ಕ್ರಮ ಯಾವ ರೀತಿಯಲ್ಲಿ ಜನರ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂಬುದನ್ನ ಕಾದು ನೋಡಬೇಕಿದೆ.