ಹುಕ್ಕೇರಿ: ತಾಲೂಕಿನ ಯಲ್ಲಾಪುರ (ಕ) ಗ್ರಾಮದಲ್ಲಿ ಶ್ರೀ ರೇಣುಕಾ ದೇವಿಯ ಮೂರ್ತಿಯ ಪ್ರಾಣಪ್ರತಿಷ್ಟಾಪನೆ ಮತ್ತು ನೂತನ ಕಟ್ಟಡದ ಉದ್ಘಾಟನೆ ನೆರವೇರಿತು.
ಕಾರ್ಯಕ್ರಮದಲ್ಲಿ ಸಕಲ ವಾದ್ಯಗಳೊಂದಿಗೆ ಕುಂಭ ಮೇಳ ಹಾಗೂ ದೇವಸ್ಥಾನಕ್ಕೆ ಕಳಸಾರೋಹಣ ಹಮ್ಮಿಕೊಳ್ಳಲಾಗಿತ್ತು. ದೇವಿಯ ಮೂರ್ತಿಯನ್ನು ಶ್ರೀ ಷ.ಬ್ರ. ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಕುಂದರಗಿ-ಪಾಶ್ಚಾಪುರ ಅವರ ಅಮೃತ ಹಸ್ತದಿಂದ ಪ್ರತಿಷ್ಠಾಪಿಸಲಾಯಿತು.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಪ.ಪೂಜ್ಯ.ಶ್ರೀ.ಮ.ನಿ.ಪ್ರ. ಗುರು ಬಸವಲಿಂಗ ಮಹಾಸ್ವಾಮಿಗಳು-ಅರಬಾವಿ, ಪ.ಪೂಜ್ಯ. ಶ್ರೀ. ಮ.ನಿ.ಪ್ರ ಡಾ. ಅಮರ ಸಿದ್ದೇಶ್ವರ ಮಹಾಸ್ವಾಮಿಗಳು- ಅಂಕಲಗಿ, ಪ.ಪೂಜ್ಯ. ಶ್ರೀ. ಮ.ನಿ.ಪ್ರ ಮುದಿ ಬಾಳಯ್ಯಾ ಮಹಾಸ್ವಾಮಿಗಳು- ತವಗ, ಪೂಜ್ಯ ಶ್ರೀ ಗುರುದೇವರು ಪ್ರಭುಲಿಂಗೆಶ್ವರ ಸಂಸ್ಥಾನ-ಕಮತೇನಟ್ಟಿ, ಪೂಜ್ಯ ಶ್ರೀ ಗವಿ ಸಿದ್ದೇಶ್ವರ ಮಹಾಸ್ವಾಮಿಗಳು-ಬಸ್ಸಾಪೂರ ಪೂಜ್ಯರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಲ್ಲ ಪರಮ ಪೂಜ್ಯ ಸ್ವಾಮಿಗಳು ಜ್ಞಾನಾಮೃತವನ್ನು ಸುರಿಸಿದರು. ಪೂಜ್ಯ ಶ್ರೀ ಗುರು ದೇವರು ಪ್ರಭುಲಿಂಗೇಶ್ವರ-ಕಮತೇನಟ್ಟಿಯವರು “ದೆವರ ಕಾರ್ಯವು ಧರ್ಮ ಕಾರ್ಯ” ಎಂದು ತಮ್ಮ ದಿವ್ಯ ಜ್ಞಾನವನ್ನು ನೆರೇದಿದ್ದ ಎಲ್ಲರಿಗು ಹಂಚಿದರು. ಪೂಜ್ಯ ಶ್ರೀ. ಮ.ನಿ.ಪ್ರ ಗುರುಬಸಲಿಂಗ ಮಹಾಸ್ವಾಮಿಗಳು- ಅರಬಾವಿ ಅವರು ಜನರಿಗೆ “ಹಣದಾಯಿಗಳಾಗದೇ ಗುಣದಾಯಿಗಳಾಗಿ” ಎಂದು ತಿಳಿಸಿಕೊಟ್ಟರು. ಮತ್ತು ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಅವರ ಪುತ್ರರಾದ ಶ್ರೀ ರಾಹುಲ್ ಸತೀಶ್ ಜಾರಕಿಹೊಳಿ ಅವರು ಕಾರ್ಯಮದ ಆತಿಥ್ಯವನ್ನು ವಹಿಸಿ ನಾವು ಎಂದು ನಿಮ್ಮ ಜೊತೆಗೆ ಇರುತ್ತವೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಲಗೌಡ.ಬ.ಪಾಟೀಲ, ಮಂಜುನಾಥ್ ಪಾಟೀಲ, ಅಡಿವೆಪ್ಪಾ ಜಿಂಡ್ರಾಲ್, ಲಖಮಗೌಡ ಪಾಟೀಲ, ರಾಜಶೇಖರ ಪಾಟೀಲ, ಅರ್ಜುನ ಕಾಡಗೌಡರ್, ಭೀಮಗೌಡ ಹೊಸಮನಿ, ಲಕ್ಷ್ಮೀ ಜಿಂಡ್ರಾಳ್, ಕಾಶಪ್ಪಾ ಪಾಟೀಲ, ಮಾನಿಕರಾವ್ ಪಾಟೀಲ, ಸುಭಾಷ್ ಹರಿಜನ, ಕೌಸಲ್ಯ ಜಡಗಿ, ಮತ್ತು ಊರಿನ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.