ಕಬ್ಬೂರ -ಬಿ.ಜಿ. ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಶ್ರೀಮತಿ ಅನ್ನಪೂರ್ಣಾ ಬ.ಬೆಲ್ಲದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆಯ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಕಿರಣ ಚೌಗಲಾ ರವರು ದೀಪವನ್ನು ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮಾಜದಲ್ಲಿ ಗುರುಗಳ, ತಂದೆ ತಾಯಿಗಳ ಋಣ ಬಹಳಷ್ಟಿದೆ ಶ್ರೀ ಮಹೇಶ ಬೆಲ್ಲದ ರವರು ತಂದೆ ತಾಯಿಯ ಹೆಸರಿನ ಮೇಲೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು ಮೂಲಕ ತಂದೆ ತಾಯಿಗಳನ್ನು ಋಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ಉತ್ಕೃಷ್ಟ ದರ್ಜೆಯ ಶಿಕ್ಷಣದ ಸವಲತ್ತುಗಳು ದೊರಕುವ ಹಾಗೆ ಮಾಡಿ ತೀರಿಸುತ್ತಿದ್ದಾರೆ ಅವರ ಕಾರ್ಯ ವಿದ್ಯಾರ್ಥಿಗಳಿಗೆ ಮಾದರಿಯಾಗುತ್ತದೆ.
ವಿದ್ಯಾರ್ಥಿಗಳು ಪ್ರಯತ್ನಿಶೀಲರಾಗಬೇಕು ಸದಾ ಸಮಾಜ ಮುಖಿಯಾಗಿ ಬೆಳೆಯಬೇಕು ಸಮಾಜದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇವೆ ಅವುಗಳನ್ನು ಪಡೆದುಕೊಳ್ಳಲು ನೀವು ನಿರಂತರ ಪ್ರಯತ್ನ ಶೀಲರಾಗಿರಿ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಭಕ್ತಿ ಬಂಡವಾಡೆ, ವೈಭವಿ ಬಡಿಗೇರ, ಶಂಕರ ಜೀವನಿ, ಮಣಿಕಂಠ ಮಾನಗಾವಿ, ಶುಭಂ ಖಾಂಡೆಕಾರ, ಲಕ್ಷ್ಮಿ ಬೆಂಡವಾಡೆ, ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಬೆಲ್ಲದ, ಪ್ರಾಂಶುಪಾಲರಾದ ಡಾ. ಮಹೇಂದ್ರ ಕೆ.ಆರ್., ಉಪ ಪ್ರಾಂಶುಪಾಲರಾದ ಶ್ರೀ ರಾಜು ಮಹಿಪತಿ, ಸಿದ್ದಪ್ಪ ಮುರಚಿಟ್ಟಿ, ಶ್ರೀನಿವಾಸ ಕೆರಿಮನಿ, ಬಸವರಾಜ ಕರನೂರಿ, ರಾಜು ತೊಳೆ, ಸುರೇಶ ಮಾದರ, ಮೈನಾ ಸುಂದರಿ ಪಾಟೀಲ, ಆರತಿ ಕುಲಕರ್ಣಿ, ಶಿವಾನಂದ ಚೌಗಲಾ, ಚೇತನ ಕಾಡೇಶಗೋಳ, ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.