ಹುಕ್ಕೇರಿ : ಇಂದು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಸಮೀಪದ ಹೊಸ್ಸುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಯಿಯ ಪಾದ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಯಿಯ ಪೂಜೆಯೆ ದೇವರ ಪೂಜೆ ಎನ್ನುವ ಹಾಗೆ ಇಂದು ಮಕ್ಕಳು ತಮ್ಮ ತಾಯಂದಿರ ಪಾದ ಪೂಜೆ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದರು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ಮಾತಿನಂತೆ ಹೊಸ್ಸುರ ಕಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಶ್ರೀ ಎಚ್.ಎಲ್. ಪೂಜೆರಿ ಹಾಗೂ ಸಹ ಶಿಕ್ಷಕಿಯರಾದ ಮಹಾದೇವಿ ಶ ಖಡಾಡಿ ಮತ್ತು
ಮೇಘಾ ರಾ ಸಾರಾಪುರಿಯವರು ಮಕ್ಕಳಿಂದ ತಾಯಿಯ ಪಾದಪೂಜೆ ಮಾಡಿಸುವ ಮೂಲಕ ಮಾತೃ ಭಕ್ತಿಯನ್ನು ಭಿತ್ತಿ ದರು.
ಕಾರ್ಯಕ್ರಮದಲ್ಲಿ ಮಕ್ಕಳು ಸೇರಿದ ಎಲ್ಲ ತಾಯಂದಿರಿಗೆ ಚುಟುಕುಗಳು ಹಾಗೂ ಕವನಗಳನ್ನು ಹೇಳುವ ಮೂಲಕ ತಾಯಂದಿಯರಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಹಿರಿಯರ ಮಾತಿನಂತೆ ಊರಿಗೆ ಅರಸನಾದರು ತಾಯಿಗೆ ಮಗ ಎಂಬ ನಾಣ್ಣುಡಿಯನ್ನು ಸ್ಮರಿಸಿದರು. ಶ್ರೀಮತಿ ಶಿಲ್ಪಾ ರಾಮಗೋನಟ್ಟಿಯವರು ಕಾರ್ಯಕ್ರಮದ ಆದಿತ್ಯ ವಹಿಸಿ ತಾಯಿಯ ಮಹತ್ವವನ್ನು ತಿಳಿಸಿದರು. ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಬಾಳೇಶ ರಾಮಗೋನಟ್ಟಿ ಯವರು ತಾಯಿಯ ತ್ಯಾಗ, ಸೇವೆ, ಮಾತೃ ಧರ್ಮದ ಬಗ್ಗೆ ಸವಿಸ್ತಾರವಾಗಿ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಆರ್.ಎಸ್.ಅಮ್ಮಿ, ಶ್ರೀ ತಡಸಲ್, ಶ್ರೀಮತಿ ಭಾಗವ್ವ ವಡ್ರಾಳಿ, ಮಹಾದೇವಿ ಶ ಖಡಾಡಿ, ಎಚ್.ಎಲ್.ಪೂಜೆರಿ, ಮೇಘಾ ಸಾರಪುರಿ, ಊರಿನ ಗಣ್ಯರು ಹಾಗೂ ವಿದ್ಯಾರ್ಥಿಗಳು ಮತ್ತು ಊರಿನ ಸಾರ್ವಜನಿಕರು ಭಾಗವಹಿಸಿದ್ದರು.