ಯಮಕನಮರಡಿ: ಹುಕ್ಕೇರಿ ತಾಲೂಕಿನ ದಡ್ಡಿ -ಮೋದಗಾ ಗ್ರಾಮದ ಶ್ರೀ ಭಾವೇಶ್ವರಿ ದೇವಿಯ ಜಾತ್ರೆ ಗುರುವಾರ ಫೆಬ್ರುವರಿ 13 ರಿಂದ 15 ರವರೆಗೆ ನಡೆಯಲಿದೆ ಶ್ರೀ ಭಾವೇಶ್ವರಿe ಟ್ರಸ್ಟ್ ಕಮಿಟಿ ಹಾಗೂ ಗ್ರಾಮ ಪಂಚಾಯಿತಿಯಿಂದ ಜಾತ್ರೆಗೆ ಸಕಲ ಸಿದ್ಧತೆ ನಡೆಯುತ್ತಿದೆ.
ಫೆಬ್ರುವರಿ 13ರಂದು ಸಾಯಂಕಾಲ 6:00ಯಿಂದ ಶುಕ್ರವಾರ ಬೆಳಗ್ಗೆ 6:00 ವರೆಗೆ ಶಸ್ತ್ರ ಇಂಗಳಿ ಇರುತ್ತದೆ.
ಶುಕ್ರವಾರ 14ರಂದು ತುಂಬಿದ ಜಾತ್ರೆ ಹಾಗೂ ಶನಿವಾರ 15ರಂದು ಪಲ್ಲಕ್ಕಿ ಉತ್ಸವ ಹಾಗೂ ಸಾಯಂಕಾಲದ ನಂತರ ಜಾತ್ರೆ ಸಮಾಪ್ತಿ ವಾಗುತ್ತದೆ.ಅದೇ ರೀತಿ ಪ್ರತಿವರ್ಷದಂತೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಸಾರಿಗೆಯ ಬಸ್ ವ್ಯವಸ್ಥೆ ಇರುತ್ತದೆ.ವರದಿ:ಕಲ್ಲಪ್ಪ ಪಾಮನಾಯಿಕ್