ಹುಕ್ಕೇರಿ: ತಾಲೂಕಿನ ಕುಂದರ ನಾಡಿನ ಪಾಚಾಪುರ ಗ್ರಾಮದಲ್ಲಿ ಫೆಬ್ರುವರಿ 14, 2025 ರ ಶುಕ್ರವಾರ ದಿನ ದ್ವಿತೀಯ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗಲಿದೆ.
ಸದರಿ ವಾರ್ಷಿಕೋತ್ಸವವು ಒಂದು ದಿನ ಮಾತ್ರ ಜರುಗಲಿದ್ದು, ಅಂದು ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಆಲೂರಮ್ಮ ದೇವಿಗೆ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಅಭಿಷೇಕ, ಪೂಜಾ ಅಲಂಕಾರ, ಉಡಿ ತುಂಬುವ ಕಾರ್ಯಕ್ರಮ, ಮಹಾಪ್ರಸಾದ,ಎತ್ತುಗಳ ಮೆರವಣಿಗೆ, ರೈತರಿಗೆ ಸನ್ಮಾನ ಚೌಡಕಿ ಪದಗಳು, ಹೀಗೆ ವಿಶಿಷ್ಟಮಯ ಕಾರ್ಯಕ್ರಮಗಳು ಮುಂಜಾನೆಯಿಂದ ರಾತ್ರಿಯವರೆಗೆ ಜರುಗಲಿವೆ ಎಂದು ಜಾತ್ರಾ ಮಹೋತ್ಸವದ ಕಮಿಟಿಯ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಎ. ವೈ. ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗಾಗಿ ಸಂಪರ್ಕಿಸಿ