ನವದೆಹಲಿ: ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅನಾರೋಗ್ಯದ ಕಾರಣ ಗುರುವಾರ ದಾಖಲಿಸಲಾಗಿತ್ತು. ಇದರ ಮಧ್ಯೆ ಅವರು ಚೆನ್ನಾಗಿದ್ದಾರೆ ಹಾಗೂ ಇಂದು (ಶುಕ್ರವಾರ) ಡಿಸ್ಟಾರ್ಜ್ ಆಗಿದ್ದಾರೆ.
78 ವರ್ಷದ ಸೋನಿಯಾ ಗಾಂಧಿ ಅವರನ್ನು ಆಸ್ಪತ್ರೆಗೆ ಲಘು ಪ್ಯಾಂಕ್ರಿಯಾಟೈಟಿಸ್‌ಗೆ ಗುರುವಾರ ದಾಖಲಿಸಲಾಗಿದ್ದು, ಅವರನ್ನು ವೈದ್ಯರ ತಂಡದ ನಿಗಾದಲ್ಲಿ ಇರಿಸಲಾಗಿತ್ತು. ಸಧ್ಯ ಅವರನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆಯಾಗಿರುವ ಶ್ರೀಮತಿ ಗಾಂಧಿ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹಲವು ಪಕ್ಷಗಳ ತೊಡಗುವಿಕೆಯಿಂದ ಹಿಂದೆ ಸರಿದಿದ್ದಾರೆ. ಇನ್ನು ಕಳೆದ ವಾರ ಫೆಬ್ರವರಿ 13 ರಂದು ಸಂಸತ್ತಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ರಾಜ್ಯಸಭೆಯಲ್ಲಿ ಕಾಣಿಸಿಕೊಂಡಿದ್ದೇ ಕೊನೆಯದಾಗಿತ್ತು.