ಚಾಮರಾಜನಗರ: ಜಿಲ್ಲೆಯ ಮುಕ್ಕಡಳ್ಳಿ ಗ್ರಾಮದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಕ್ಕಡಹಳ್ಳಿ ಇಲ್ಲಿ ಗೋವಿತ್ ಕಿರಣ್ ಹಾಗೂ ಶ್ರೀಮತಿ ರಕ್ಷಿತ ಎಂ ದಂಪತಿ ತಮ್ಮ ವಿವಾಹ ವಾರ್ಷಿಕೋತ್ಸವ ಸ್ಮರಣಾರ್ಥವಾಗಿ, ವ್ಯಾಸಾಂಗ ಮಾಡಿದ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು, ಐಡಿ ಕಾರ್ಡ್ ವಾಟರ್ ಬಾಟಲಿಯನ್ನು ವಿತರಿಸುವ ಮೂಲಕ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಕ್ಕಡಹಳ್ಳಿಯಲ್ಲಿ ಎಲ್ ಕೆ ಜಿ, ಯು ಕೆ ಜಿ ಯಿಂದ ಏಳನೇ ನೆಯ ತರಗತಿವರೆಗೆ, ಸುಮಾರು 120 ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಗೋವಿತ್ ಕಿರಣ್ ಹಾಗೂ ಶ್ರೀಮತಿ ರಕ್ಷಿತ ಎಂ ದಂಪತಿಗಳು, ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಿಂಗಮ್ಮಣ್ಣಿ, ಶಾಲಾ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.