ಹುಕ್ಕೇರಿ: ತಾಲೂಕಿನ ದಡ್ಡಿ ಶ್ರೀ ವಿಠ್ಠಲ ರುಕ್ಮಾಯಿ ದೇವಾಲಯದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಎರಡು ದಿನಗಳ ಕಾಲ ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇತ್ತೀಚೆಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಅತಿ ಸಂಭ್ರಮ ಸಡಗರದಿಂದ ಮಹಿಳೆಯರಿಂದ ಲೇಜಿಮ್ ಹಾಗೂ ಭಜನೆ ಪದಗಳ ಮುಖಾಂತರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದಡ್ಡಿ ರಾಮೇವಾಡಿ ಗ್ರಾಮದ ಭಕ್ತಾದಿಗಳ ವತಿಯಿಂದ ಹರಿಪಥ, ಕೀರ್ತನೆ ಭಜನೆ, ಪ್ರವಚನ ಮುಂತಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಅಸಂಖ್ಯಾತ ಭಕ್ತರು ಇದರ ಸದುಪಯೋಗ ಪಡೆದುಕೊಂಡರು.