ಚಿಕ್ಕೋಡಿ: ಶ್ರೀ ಬಿ. ಜಿ. ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಕಬ್ಬೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಚಿಕ್ಕೋಡಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಚಿಕ್ಕೋಡಿ ವತಿಯಿಂದ 2024-25 ನೇ ಸಾಲಿನ ಚಿಕ್ಕೋಡಿ ತಾಲೂಕಾ ಮಟ್ಟದ ದ್ವಿತೀಯ ಸೋಪಾನ ಪರೀಕ್ಷೆ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ಸಂಸ್ಥಾಪನಾ ಮತ್ತು ಚಿಂತನಾ ದಿನ ಹಾಗೂ ಸರ್ವಧರ್ಮ ಪ್ರಾರ್ಥನೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐ.ಎಸ್ ಇಕ್ಕಲಮರದ ಕ್ಷೇತ್ರ ಸಮನ್ವಯ ಅಧಿಕಾರಿಗಳು ಚಿಕ್ಕೋಡಿ ಇವರು ಬೆಡನ್ ಪೊವೆಲ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪವನ್ನು ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಹತ್ವವನ್ನು ತಿಳಿಸಿದರು. ಎನ್.ಜಿ.ಪಾಟೀಲ (ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನಾ ಶಿಕ್ಷಕರು) ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆಯುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಧೈರ್ಯ, ಸಂಯಮ, ಕಾರ್ಯದಕ್ಷತೆ, ನಾಯಕತ್ವದ ಗುಣ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಉದ್ಯೋಗದಲ್ಲಿ, ಶಿಕ್ಷಣದಲ್ಲಿ ಮೀಸಲಾತಿಯನ್ನು ಸಹ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲೆಯ ಪ್ರಾಂಶುಪಾಲರಾದ ಡಾ. ಮಹೇಂದ್ರ ಕೆ.ಆರ್. ಮಾತನಾಡಿ ವಿದ್ಯಾರ್ಥಿಗಳಲ್ಲಿ ಶಿಸ್ತು, ಒಗ್ಗಟ್ಟು, ನಾಯಕತ್ವದ ಗುಣ, ಸೇವಾ ಭಾವನೆ ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜಾರೋಹಣ ಕಾರ್ಯಕ್ರಮ, ಧ್ವಜ ಗೀತೆ, ಸರ್ವಧರ್ಮ ಪ್ರಾರ್ಥನಾ ಗೀತೆ, ಸ್ವಾಗತ ನೃತ್ಯ, ಭಾಷಣ ಮುಂತಾದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ನೆರವೇರಿಸಿದರು.
ದ್ವಿತೀಯ ಸೋಪಾನ ಪರೀಕ್ಷೆ ಯನ್ನು ಹಮ್ಮಿಕೊಳ್ಳಲಾಗಿತ್ತು ಅಂದಾಜು ನೂರಕ್ಕಿಂತ ಹೆಚ್ಚು ಸರಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಡಾ. ಪ್ರಕಾಶ ಬ. ಬೆಲ್ಲದ, ಡಿ.ಬಿ. ಅತ್ತಾರ್, ರಾಜು ಮಹಿಪತಿ, ಕೆ.ಬಿ.ಮಾಳ್ಯಾಗೋಳ, ಶ್ರೀ ಗೋಪಾಲ ಪತ್ತಾರ, ಶ್ರೀಮತಿ ಶೈಲಾ ಜೋಶಿ, ಶ್ರೀಮತಿ ಶಾಂತಾ ಮಾನೆ, ರಾಜಕುಮಾರ ಮುತಾರೆ, ಶ್ರೀಕಾಂತ ಕರೋಶಿ, ವೈಶಾಲಿ ಡೊಂಗ್ರೆ, ರೂಪಾ ರಾಯಮನೆ ಹಾಗೂ ಶಾಲೆಯ ಎಲ್ಲ ಭೋದಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಸಿದ್ದಪ್ಪ ಮುರಚಿಟ್ಟಿ ನಿರೂಪಿಸಿದರು.