ಬೆಳಗಾವಿ: ಬೆಂಗಳೂರು ಕರ್ನಾಟಕ ವಿಧಾನಸಭೆ ಸಚಿವಾಲಯದ ವತಿಯಿಂದ ಪ್ರಥಮ ಬಾರಿಗೆ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ-2025 ಹಮ್ಮಿಕೊಳ್ಳಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಅಂಗಾಂಗ ದಾನದ ಮಹತ್ವ ಹಾಗೂ ದೇಹದಲ್ಲಿರುವ ಅಂಗಾಂಗಗಳ ಪ್ರಾತ್ಯಕ್ಷಿಕ ಪ್ರಯೋಗ ಬಗ್ಗೆ ಬೆಳಗಾವಿಯ ಕೆಎಲ್ಇ ವಿಶ್ವವಿದ್ಯಾಲಯದ ಶ್ರೀ ಬಿ ಎಂ ಕೆ ಆಯುರ್ವೇದ ಮಹಾವಿದ್ಯಾಲಯ ಬೆಳಗಾವಿಯ ಶರೀರ ರಚನಾ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಬೈಲಹೊಂಗಲ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಡಾ. ಮಹಾಂತೇಶ ರಾಮಣ್ಣವರ ಇವರು ವಿಶೇಷ ಸಂಪನ್ಮೂಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ವಿಧಾನಸಭಾದ ಆವರಣದಲ್ಲಿ ಅಂಗಾoಗ ದಾನದ ಪ್ರಾತ್ಯಕ್ಷ ಪ್ರಯೋಗವನ್ನು ಸಾರ್ವಜನಿಕರಿಗೆ ತಿಳಿಸುತ್ತಾ ‘ಬದುಕಿರುವಾಗ ದುಶ್ಚಟಗಳಿಗೆ ಬೀಳದೆ ಅತ್ಯಂತ ಮಹತ್ವವಾದ ಅಂಗಾಂಗಗಳಾದ ಹೃದಯ, ಕಿಡ್ನಿ, ಲಿವರ ಮುಂತಾದ ಅವಯಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಮರಣ ನಂತರ ಅಂಗಾಂಗ ದಾನ ಹಾಗೂ ದೇಹದಾನ ಮಾಡಬೇಕೆಂದು’ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಿಡ್ನಿ ತಜ್ಞರಾದ ಡಾ.ಆಶಿಶ್ ಶೀತನಾಡಿ, ಆಹಾರ ತಜ್ಞ ಡಾ. ಸುನಿತಾ ರಾವ್ ಉಪಸ್ಥಿತರಿದ್ದರು. ಡಾ. ಮಹಾಂತೇಶ ರಾಮಣ್ಣವರ ಅವರನ್ನು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಅಂಗಾಂಗದಾನ ಮಹತ್ವ ಹಾಗೂ ದೇಹದಾನದ ಅರಿವು ಹಾಗೂ ಜಾಗೃತಿ ಮೂಡಿಸುತ್ತಿರುವ ಡಾ. ಡಾ ಮಹಾಂತೇಶ ರಾಮಣ್ಣವರ ಅವರನ್ನು ವಿಧಾನಸಭಾದ ಸಭಾಪತಿಗಳಾದ ಯು.ಟಿ ಖಾದರ್ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.