ಸಂಕೇಶ್ವರ: ಪುರಸಭೆಯ ಅಧಿಕಾರಿಗಳು ಯಾವುದೇ ಕೆಲಸ ಮಾಡುತ್ತಿಲ್ಲ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ವಿರೋಧ ಪಕ್ಷದ ಸದಸ್ಯರಾದ ಮಹೇಶ ಹಟ್ಟಿವಳಿ ಹಾಗೂ ದೀಲಿಪ ಹೊಸಮನಿ ಅವರು ಅಧ್ಯಕ್ಷೆ ಶೀಮಾ ಹತನೂರೆ ಮತ್ತು ಉಪಾಧ್ಯಕ್ಷ ವಿವೇಕ ಕ್ವಳ್ಳಿ ರಾಜೀನಾಮೆ ನೀಡಿಬೇಕು ಎಂದು ಆಗ್ರಹಿಸಿ ಒತ್ತಾಯಿಸಿದರು.
ಸಂಕೇಶ್ವರ ಪುರಸಭೆಯ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಆಡಳಿತದ ವಿರುದ್ದ ವಿರೋಧ ಪಕ್ಷದ ಸದಸ್ಯರು ವಾಗ್ದಾಳಿ ನಡೆಸಿ, ನಿಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಿಲ್ಲ, ಜನರ ಸಮಸ್ಯೆ ಯಾರು ಕೇಳಿತ್ತಿಲ್ಲ ಎಂದರು.
ಬಜೆಪಿ ನಡೆಸುತ್ತರುವ ಸಂಕೇಶ್ವರದ ಪುರಸಭೆ ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಿದೆ, ಅಧಕ್ಷೆ ಶೀಮಾ ಹತನೂರೆ ಅವರು ಯಾವುದೇ ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಆದ ಕಾರಣ ಅಧಿಕಾರಿಗಳ ಹಿಡಿತ್ತದಲಿಲ್ಲ ಎಂದು ಸದಸ್ಯರು ಹೇಳಿದರು.
ವರದಿ:ಕಲ್ಲಪ್ಪ ಪಾಮನಾಯಿಕ್