ಯಮಕನಮರಡಿ : ಮಕ್ಕಳು ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಂದೆ-ತಾಯಿಯರು ಕನಸು ಕಾಣುತ್ತಾರೆ. ಸಾಕು ಸಲುಹಿದ ತಂದೆ ತಾಯಿಯರ ಋಣ ಮತ್ತು ಉತ್ತಮ ಶಿಕ್ಷಣ ಕಲಿಸಿದ ಗುರುಗಳಿಗೆ ಎಂದಿಗೂ ಮರೆಯಬಾರದು ಎಂದು ಯಮಕನಮರಡಿ ಹುಣಸಿಕೊಳ್ಳ ಮಠದ ಶ್ರೀ ಗುರು ರಾಚೋಟಿ ಮಹಾಸ್ವಾಮಿಗಳು ಹೇಳಿದರು.
ಅವರು ಬುಧವಾರ ದಿ ೫ ರಂದು ಹಿಡಕಲ್ ಡ್ಯಾಮ್‌ನಲ್ಲಿ ಯಮಕನಮರಡಿ ಸಹಕಾರಿ ಶಿಕ್ಷಣ ಸಂಸ್ಥೆಯ ಎಚ್.ಡಿ.ಪಿ ಪ್ರೌಢಶಾಲೆ ಇದರ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಚಿಕ್ಕೋಡಿ ಸಾಹಿತಿಗಳಾದ ಬಸವರಾಜ ಆರ್ ಹೊನಗೌಡರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಸಾಧನೆಗಾಗಿ ಸಾಕಷ್ಟು ಶ್ರಮ ವಹಿಸುವುದು ಅನಿವರ‍್ಯವಾಗಿದೆ. ಉತ್ತಮ ಶಿಕ್ಷಣ ಕಲಿಯುವುದರ ಜೊತೆಗೆ ಒಳ್ಳೆಯ ಸಂಸ್ಕöÈತಿ ಸಂಸ್ಕಾರ ಕಲಿಯಬೇಕೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಿ.ಇ ಸೊಸೈಟಿಯ ಉಪಾಧ್ಯಕ್ಷ ವ್ಹಿ.ಎಮ್. ದುಗಾಣಿ ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಎಸ್ ಆರ್ ಶೆಟ್ಟರ, ಶಿಕ್ಷಣ ಪ್ರೇಮಿ ಎಂ ಕೆ ಮುಲ್ಲಾ, ನಿವೃತ್ತ ಮುಖ್ಯ ಶಿಕ್ಷಕ ಎಂ. ಎಸ್ ಮಲ್ಲೋಳಿ, ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಬಿ ಆರ್ ಸರನೋಬತ ಸ್ವಾಗತಿಸಿದರು. ಶಿಕ್ಷಕ ಜೆ.ಎಸ್ ಕರನ್ನವರ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಇ.ಪಿ. ಮಾಸಿ,್ತ ಎಸ್.ಡಿ. ಕಮ್ಮಾರ, ಎ. ಕೆ ಕಾಂಬಳೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿ ಎನ್ ಬಿ ದಾಸನ್ನವರ ಪೂಜಾ ಈಟಿ ವಂದನಾರ್ಪಣೆ ಮಾಡಿದರು. ಶಿಕ್ಷಕ ವ್ಹಿ.ವ್ಹಿ. ತುಬಚಿ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದರು.