ನಮ್ಮೂರ ಧ್ವನಿ ಸುದ್ದಿ
ಬೆಳಗಾವಿ: ನಗರದ ಡಿಪೋ 1ರ ಅಳ್ಳಾವರ ಬಸ್ ನಲ್ಲಿ ಡ್ಯೂಟಿ ಬದಲಿಸಿದ್ದಕ್ಕೆ ಬಸ್ ನಲ್ಲಿಯೇ KSRTC ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
57 ವರ್ಷದ ನೌಕರ ಕೇಶವ ಕಮಡೋಳಿ ಬಸ್ ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸ್ ವಾಷಿಂಗ್ ಬದಲು ಪಂಕ್ಚರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದರು ಎಂದು ಅಧಿಕಾರಿಗಳ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು, ಈಗ ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.
ಕೇಶವ ಅವರು ಬೆಳಗಾವಿಯ ಹಳೆ ಗಾಂಧಿನಗರ ನಿವಾಸಿಯಾಗಿದ್ದಾರೆ. ಬೆನ್ನು ನೋವು ಇದ್ದರೂ ಬೇಕಂತಲೇ ಕೇಶವ ಅವರಿಗೆ ಡ್ಯೂಟಿ ಬದಲಿಸಲಾಗಿದೆ. ಡ್ಯೂಟಿ ಬದಲಾವಣೆ ಮಾಡದಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ಯಾರೇ ಅನ್ನದೆ ಡ್ಯೂಟಿ ಬದಲಾವಣೆ ಮಾಡಿದ್ದರು.
ಹೀಗಾಗಿ, ಕೆಲಸದ ಒತ್ತಡ ತಡೆದುಕೊಳ್ಳದೆ ಕೇಶವ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಯಾರ್ಡ್ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.