ಸಂಕೇಶ್ವರ: ಗೊದಾಬಾಯಿ ಕರನಿಂಗ ಮೆಮೊರಿಯಲ್ ಪೌಂಡೇಶನ್ ಮಾರ್ಗದರ್ಶಕರು ಹಾಗೂ ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಇಲಾಖೆಯ ಅಧೀಕ್ಷಕರಾದ ನವಿನ್ ಗಂಗರೆಡ್ಡಿ ಅವರ ಜನ್ಮದಿನದ ನಿಮಿತ್ಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಸಂಕೇಶ್ವರದಲ್ಲಿ ಗೊದಾಬಾಯಿ ಕರನಿಂಗ ಮೆಮೊರಿಯಲ್ ಪೌಂಡೇಶನ್ ಹಾಗೂ ನಿಖಿಲ್ ಸ್ಪೋರ್ಟ್ಸ್ ಕ್ಲಬ್ ಮತ್ತು ಗೆಳೆಯರ ಬಳಗದ ವತಿಯಿಂದ ನವಿನ್ ಗಂಗರೆಡ್ಡಿ ಅವರ
ಜನ್ಮ ದಿನವನ್ನು ರಕ್ತದಾನ ಮಾಡುವ ಮೂಲಕ ಆಚರಣೆ ಮಾಡಲಾಯಿತು.
ನಂತರ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ರಕ್ತದಾನಿಗಳಿಗೆ ಹುಕ್ಕೇರಿ ತಾಲೂಕಾ ವೈದ್ಯಾಧಿಕಾರಿಗಳಾದ ಉದಯ ಕುಡಚಿ ಹಾಗೂ ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಇಲಾಖೆಯ ಅಧೀಕ್ಷಕರು ಆದ ನವಿನ್ ಗಂಗರೆಡ್ಡಿ ಅವರು ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಎ.ಕಂಬಾರ ಮಾತನಾಡಿ, ಬಡವರು, ದೀನ ದಲಿತರಿಗೆ ಹಾಗೂ ನಿರಾಶ್ರಿತರಿಗೆ ಪೌಂಡೇಶನ್ ಮೂಲಕ ಸಮಾಜ ಸೇವಕನಾಗಿ ಮತ್ತು ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸೇವೆಯನ್ನು ಕಲ್ಪಿಸಿಕೊಡುವುದರೊಂದಿಗೆ ಒಳ್ಳೆಯ ಕಾರ್ಯ ನಿರ್ವಹಿಸುತ್ತಿವ ನವಿನ್ ಗಂಗರೆಡ್ಡಿ ಅವರಿಗೆ ಜನ್ಮ ದಿನದ ಶುಭಾಶಯಗಳು ತಿಳಿಸಿದರು.
ವರದಿ:ಕಲ್ಲಪ್ಪ ಪಾಮನಾಯಿಕ್