ಹುಕ್ಕೇರಿ: ವಿದ್ಯಾರ್ಥಿಗಳು ಪ್ರಾಯೋಗಿಕ ವರದಿಯನ್ನು ಅಚ್ಚುಕಟ್ಟಾಗಿ ರೂಪಿಸುವದರಿಂದ ಪ್ರತಿ ವಿಷಯದಲ್ಲಿನ ಜ್ಞಾನವನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಬಿಎಸ್ ನಾವಿ ಅಭಿಪ್ರಾಯ ಪಟ್ಟರು.
ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀ ವಿ.ಎಂ ಕತ್ತಿ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜರುಗಿದ ಬಿ.ಎ ಬಿ ಕಾಂ, ಬಿ. ಎಸ್ಸಿ, ಬಿಬಿಎ ಬಿ ಎಸ್ ಡಬ್ಲ್ಯೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವರದಿ ರಚನೆ, ಮಂಡನೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ವಿ.ಎಂ ಕತ್ತಿ ಸಮೂಹ ಸಂಸ್ಥೆಗಳ ಮಾರ್ಗದರ್ಶಕರಾದ ಶ್ರೀ ಪೃಥ್ವಿ ರಮೇಶ್ ಕತ್ತಿ ಮಾತನಾಡಿ ವಿದ್ಯಾರ್ಥಿಗಳು ಅವಲೋಕನ ತಕ್ಕಂತೆ ಪ್ರಾಯೋಗಿಕ ವರದಿಯನ್ನು ರಚಿಸಿ ಅದು ಋಣಾತ್ಮಕವಾಗಿಯೂ ಇರಬಹುದು ಧನಾತ್ಮಕವಾಗಿಯೂ ಇರಬಹುದು ಎಂದು ಸಲಹೆ ನೀಡಿದರು. ಮುಂಬರುವ ದಿನಗಳಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರಾಧ್ಯಾಪಕರುಗಳಿಗೆ ಜಿಲ್ಲಾಮಟ್ಟದಲ್ಲಿ ಎರಡು ದಿನಗಳವರೆಗೆ ಕಾರ್ಯಾಗಾರವನ್ನು ನಡೆಸುವ ಚಿಂತನೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಬನಹಟ್ಟಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಮಂಜಪ್ಪ ಬೆನ್ನೂರು, ಜೆ ಎಸ್ ಎಸ್ ಗೋಕಾಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ನಾಗಪ್ಪ ಎಲ್ ತೇರದಾಳ್, ಆಡಳಿತಾಧಿಕಾರಿಗಳಾದ ಕೆ. ಸಿ ಮುಚಖಂಡಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿ.ಎಸ್. ಹೂಗಾರ
ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ ಪ್ರಾಧ್ಯಾಪಕರುಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು
ಬಿಎ ಹಾಗೂ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರು ಪ್ರಾರ್ಥನೆ ಗೀತೆ ವ್ಯಕ್ತಪಡಿಸಿದರು. ಉಪನ್ಯಾಸಕಿ ಶ್ರೀಮತಿ ಆರ್ ಕೆ ಪಾಟೀಲ್ ಸ್ವಾಗತ ಹಾಗೂ ಅತಿಥಿ ಪರಿಚಯ ನಡೆಸಿಕೊಟ್ಟರು. ಬಿ ಎಸ್ ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಸಹನಾ ಚಚಡಿ ಪುಷ್ಪಾರ್ಪಣೆ ಮಾಡಿದರು. ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿ ರಾಣಿ ಹಟ್ಟಿ ವಂದಿಸಿದರು. ಪುಷ್ಪ ಅಲಕನೂರ್ ಹಾಗೂ ಶಿಲ್ಪ ನೀಲಪ್ಪಗೋಳ ಜಂಟಿಯಾಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಾಧ್ಯಾಪಕರುಗಳಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ವರದಿ :ಎ. ವೈ.ಸೋನ್ಯಾಗೋಳ
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ