ಬೆಳಗಾವಿ: ನಗರದ ಮಹಾಂತ ಭವನದಲ್ಲಿ ಮಾರ್ಚ್ 12, 2025 ಬುಧವಾರದಂದು ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ 2025 ಧರ್ಮ ಸಭೆ ಕಾರ್ಯಕ್ರಮ ಜರುಗಿತು.
ಜ್ಯೋತಿ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಗ್ಬಾಸ್ ಖ್ಯಾತಿಯ, ವಾಗ್ಮಿಗಳಾದ ಕು. ಚೈತ್ರಾ ಕುಂದಾಪುರ ಅವರು, ಜಗದ್ಗುರು ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶದ ಮೂಲಕ ವಿಶ್ವದಲ್ಲಿ ಶಾಂತಿ, ನೆಮ್ಮದಿ ಬಯಸಿದ್ದರು. ಅವರು ವಿಶ್ವಕಂಡ ಮೇರು ವ್ಯಕ್ತಿತ್ವದ ದಾರ್ಶನಿಕರು. ಇಂತಹ ಮಹನೀಯರು ಸದಾ ಸ್ಮರಣೀಯರು ಎಂದರು. ‘ಧರ್ಮ ಎಲ್ಲಿ ಇರುತ್ತದೆಯೋ ಅಲ್ಲಿ ಶಾಂತಿ ನೆಲೆಸಿರುತ್ತದೆ ಎಂಬ ವಿಚಾರವನ್ನು ರೇಣುಕಾಚಾರ್ಯರು ಪ್ರತಿಪಾದಿಸಿದ್ದರು’ ಎಂದರು. ‘ಧರ್ಮದಿಂದಲೇ ಶಾಂತಿ ಎಂಬ ಸಂದೇಶ ಸಾರಿದ್ದಾರೆ. ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು’ ಎಂದು ತಿಳಿಸಿದರು.
ಆನಂತರ ಆಶ್ರಯ ಫೌಂಡೇಶನ್ ನ ಸಂಸ್ಥಾಪಕರಾದ ಶ್ರೀಮತಿ ನಾಗರತ್ನ ರಾಮಗೌಡಾ ಅವರು ಮಾತನಾಡಿದ, 26 ವರ್ಷಗಳಿಂದ ಸ್ವತಹ ಎಚ್.ಐ.ವಿ ಸೋಂಕಿತಳಾಗಿ ಈ ಒಂದು ಫೌಂಡೇಶನ್ ನಡೆಸಿಕೊಂಡು ಬಂದಿದ್ದೇನೆ. ನಮ್ಮ ಆಶ್ರಯ ಫೌಂಡೇಶನ್ ನನ್ನಂತಹ ಹಲವು ಜನರಿಗೆ, ಉಚಿತ ಆಹಾರ,ಆಶ್ರಯ ಹಾಗೂ ವಸತಿ ಮಾಡುತ್ತಿದೆ ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ. ಚೈತ್ರ ಹಾಗೂ ನಾವು ಬಹಳ ಆತ್ಮೀಯರು. ಕಾರಣ ಬೆಳಗಾವಿಯಲ್ಲಿ ನೆರೆ ಹಾವಳಿ ಆದಾಗ ನಿರಾಶ್ರಿತರಿಗೆ ಬೆಂಗಳೂರಿಂದ ಬಂದು 7 ಹಳ್ಳಿಯ ಜನರಿಗೆ ಮುಟ್ಟಿಸುವ ಕೆಲಸ ಚೈತ್ರಾ ಅವರು ಮಾಡಿದ್ದರು. ಹಾಗಾಗಿ, ಈ ಕಾರ್ಯಕ್ರಮದ ಅತಿಥಿಯಾಗಿ ಅವರನ್ನ ಕರಿಸಿದ್ದು ನನಗೆ ತುಂಬಾ ಖುಷಿ ಕೊಟ್ಟಿದೆ. ಹಿಂದುತ್ವದ ಬಗ್ಗೆ ಅವರು ಮಡಿದ ಸೇವೆ ದೊಡ್ಡದು ಎಂದರು.
ಈ ಸಂದರ್ಭದಲ್ಲಿ, ಶ್ರೀ ಚನ್ನಬಸವ ದೇವರು ರುದ್ರಸ್ವಾಮಿಗಳ ಮಠ ಬಿಳಕಿ (ಅವರೋಳ), ವಾಗ್ಮಿ ಹಾಗೂ ಬಿಗ್ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ, ಕರ್ನಾಟಕ ಪ್ರಥಮ ಮಹಿಳಾ ಪುರೋಹಿತೆ ಶ್ರೀಮತಿ ಭಾರತಿ ಈಶ್ವರ ಕುಡಚಿಮಠ, ಶ್ರೀಮತಿ ಕೃಷ್ಣವೇಣಿ ಗುರ್ಲಹೊಸೂರ ಪಿ ಎಸ್ ಐ ಜಿಲ್ಲಾ ವಿಶೇಷ ವಿಭಾಗ ಬೆಳಗಾವಿ, ಕು. ಪ್ರೀತಿ ಸವಡಿ ಅಂತರ ನಿರ್ದೇಶನಾಲಯ ಶೂಟಿಂಗ್ ಚಾಂಪಿಯನ್ಶಿಪ್ ವಿಜೇತೆ, ಶ್ರೀಮತಿ ನಾಗರತ್ನ ರಾಮಗೌಡಾ ಸಂಸ್ಥಾಪಕರು, ಆಶ್ರಯ ಫೌಂಡೇಶನ್, ಬೆಳಗಾವಿ, ಬೆಳಗಾವಿ ಜಿಲ್ಲಾ ಅರ್ಚಕರು ಮತ್ತು ಪುರೋಹಿತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.