ಹುಕ್ಕೇರಿ: ತಾಲೂಕಿನ ದಡ್ಡಿ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಗುರುವಾರ ರಾತ್ರಿ ಕಾಮದಹನ ಮಾಡಲಾಯಿತು. ರಂಗಿನ ಹಬ್ಬ ಹೋಳಿ ಆಚರಣೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಜ್ಜಾಗಿದ್ದು, ಜನರು ಗುರುವಾರ ಬಣ್ಣಗಳ ಖರೀದಿಗೆ ಮುಗಿಬಿದ್ದಿದ್ದರು.
ಗ್ರಾಮದ ವಿವಿಧ ಅಂಗಡಿಗಳಲ್ಲಿ ರಂಗು ರಂಗಿನ ಬಣ್ಣಗಳು ಮಾರಾಟ ದೃಶ್ಯಗಳು ಕಂಡು ಬಂದವು.ಕಾಮದಹನ: ಹುಣ್ಣಿಮೆಯ ದಿನ ಕಾಮನನ್ನು ಸುಡುವುದು ಸಂಪ್ರದಾಯ. ಅದರಂತೆ, ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮ ಸೇರದಂತೆ ಹಲವು ಗ್ರಾಮಗಳಲ್ಲಿ ಬೆಳಿಗ್ಗಿನಿಂದಲೇ ಯುವಕರು ಒಟ್ಟುಗೂಡಿ ಹಲಗೆ ಬಾರಿಸುತ್ತ ಮನೆಮನೆಗೆ ತೆರಳಿ ಸಗಣಿಯ ಕುಳ್ಳು,ಕಟ್ಟಿಗೆ, ಸಂಗ್ರಹಿಸಿ ಒಂದೆಡೆ ರಾಶಿ ಹಾಕಿ. ರಾತ್ರಿ ಕಾಮನ ಪ್ರತಿಕೃತಿ ನಿರ್ಮಿಸಿ, ದಹನ ಮಾಡಿದರು.
ಅದೇ ರೀತಿ ಪ್ರತಿ ವರ್ಷದಂತೆ 125 ಕೆ.ಜಿಯ ಗುಂಡು ಎತ್ತಿ ಸಂಭ್ರಮಿಸಿದ ಯುವಕರು.
ವರದಿ:ಕಲ್ಲಪ್ಪ ಪಾಮನಾಯಿಕ್