Live Stream

[ytplayer id=’22727′]

| Latest Version 8.0.1 |

Local NewsState News

ಹುಕ್ಕೇರಿಯಲ್ಲಿ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮ

ಹುಕ್ಕೇರಿಯಲ್ಲಿ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮ

ಹುಕ್ಕೇರಿ ವರದಿ


ಹುಕ್ಕೇರಿ: ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಅನುಷ್ಠಾನದಡಿ ಸುಮಾರು 23 ಅಸಂಘಟಿತ ವರ್ಗಗಳ ಕಾರ್ಮಿಕರನ್ನು ಸರ್ಕಾರ ಗುರುತಿಸಿದೆ. ಇದರಲ್ಲಿ ಛಾಯಾಗ್ರಹಕರನ್ನು ಸಹಿತ ಅಸಂಘಟಿತ ಕಾರ್ಮಿಕರಲ್ಲಿ ಸೇರ್ಪಡೆ ಮಾಡಿದೆ, ಎಂದು ಬೆಳಗಾವಿ ಮತ್ತು ಹುಕ್ಕೇರಿಯ ಹಿರಿಯ ಕಾರ್ಮಿಕ ನಿರೀಕ್ಷಕ ಸಂಜೀವ ಬೋಸ್ಲೆ ಹೇಳಿದರು.

ಅವರು ಇತ್ತೀಚೆಗೆ ತಾಲೂಕಿನ ಹಿಡಕಲ್ ಡ್ಯಾಮ್ ದಲ್ಲಿರುವ ಶಿವಾಲಯ ಮಂಗಲ ಕಾರ್ಯಾಲಯದಲ್ಲಿ,ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ,ಹುಕ್ಕೇರಿ ತಾಲೂಕ ವತ್ತಿನಿರತ ಛಾಯಾಗ್ರಾಹಕರ ಸಂಘ ಹಾಗೂ ಕಾರ್ಮಿಕ ಇಲಾಖೆ ಹುಕ್ಕೇರಿ. ಇವರ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಮಿಕ ಕಾರ್ಡ್ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆಯ ಕರ್ನಾಟಕ ನಿವಾಸಿಗಳಿಗೆ ಮಾತ್ರ ಸೀಮಿತವಾಗಿದೆ. ಫಲಾನುಭವಿಯು ವಯೋ ಸಹಜ ಮರಣ, ಯಾವುದೇ ಕಾಯಿಲೆಯಿಂದ ಮರಣ, ಅಥವಾ ಅಕಾಲಿಕ ಮರಣ ಸೇರಿದಂತೆ ಇನ್ನಿತರ ಕಾರಣಗಳಿಂದ ಮರಣ ಹೊಂದಿದ್ದಲ್ಲಿ ಫಲಾನುಭವಿ ಕುಟುಂಬದವರಿಗೆ ಅಂತ್ಯಕ್ರಿಯೆ ವ್ಯಚ್ಚಕ್ಕಾಗಿ 10,000 ಧನ ಸಹಾಯವನ್ನು ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಈ ಸೌಲಭ್ಯ ಸಿಗಲಿದೆ ಎಂದರು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯು ಇಂತಹ 10 ಹಲವು ಅಸಂಘಟಿತ ಕಾರ್ಮಿಕರಿಗಾಗಿ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರ ಸದುಪಯೋಗ ತಾವೆಲ್ಲರೂ ಪಡೆದುಕೊಳ್ಳಬೇಕೆಂದರು.

ನಂತರ ಕೆಪಿಎ ನಿರ್ದೇಶಕ ಮಲ್ಲಿಕಾರ್ಜುನ್ ಕೆ. ಆರ್ ಮಾತನಾಡಿ ಸುಮಾರು ವರ್ಷಗಳಿಂದ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘವು ಹಲವಾರು ಬಾರಿ ಹೋರಾಟ ಮಾಡಿದ ಪ್ರಯುಕ್ತ ಇಂದು ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಅನುಷ್ಠಾನದಲ್ಲಿ ನಮ್ಮ ಛಾಯಾಗ್ರಹಕರನ್ನು ಆಸಂಘಟಿತ ಕಾರ್ಮಿಕರೆಂದು ಘೋಷಣೆ ಮಾಡಿದೆ. ಛಾಯಾಗ್ರಾಹಕರು ಬದುಕು ತುಂಬಾ ಕಷ್ಟದಲ್ಲಿ ಸಿಲುಕಿದೆ. ಪ್ರತಿಯೊಬ್ಬ ಛಾಯಾಚಿತ್ರಗ್ರಾಹಕ ಸಾಲ ಮಾಡಿ ಸುಮಾರು ಐದು ಲಕ್ಷಕ್ಕಿಂತ ಅಧಿಕ ಕ್ಯಾಮೇರಾ ಪರಿಕರಗಳನ್ನು ಖರೀದಿ ಮಾಡಬೇಕಾಗುತ್ತದೆ. ಲಕ್ಷ ಲಕ್ಷ ಸಾಲದ ಬಡ್ಡಿ ತೀರಿಸುವಲ್ಲಿ ವಿಫಲನಾಗುತ್ತಿದ್ದಾನೆ. ದಯವಿಟ್ಟು ಸರ್ಕಾರ ಬಡ್ಡಿ ರಹಿತ ಸಾಲವನ್ನು ಕೊಡಿಸುವ ಮೂಲಕ ಛಾಯಾಗ್ರಹ ಉದ್ಯಮಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದರು.

ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕ ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಅಪ್ಪು ಹುಕ್ಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ತಾಲೂಕಿನ ಎಲ್ಲ ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆ ಸಿಬ್ಬಂದಿ ಆನ್ಲೈನ್ ಮೂಲಕ ಲೇಬರ್ ಕಾರ್ಡ್ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಅವರಿಗೆ ನಮ್ಮ ಸಂಘಟನೆಯ ಎಲ್ಲ ಸದಸ್ಯರ ಪರವಾಗಿ ತುಂಬು ಹೃದಯದ ಧನ್ಯವಾದಗಳುನ್ನು ಅರ್ಪಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಬಾಲ ಕಾರ್ಮಿಕರ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ, ಬೆಳಗಾವಿ ಜಿಲ್ಲಾ ಸಮಗ್ರ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಯಮಕನಮರಡಿ, ಸಹ ಕಾರ್ಯದರ್ಶಿ ಸುರೇಶ ರಜಪುತ, ನಿರ್ದೇಶಕರಾದ ಮಂಜುನಾಥ್ ಮಜತಿ, ಭೀಮಪ್ಪ ಕಮತಿ, ಹುಕ್ಕೇರಿ ತಾಲೂಕ ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ಶಿವಾನಂದ ಪಾಟೀಲ, ಖಜಾಂಜಿ ಉಮೇಶ್ ಕರುಗುಪ್ಪಿ, ಕಾರ್ಯದರ್ಶಿ ಬಸವರಾಜ ದಾರೋಜಿ ಉಪಸ್ಥಿತಿರಿದ್ದರು.
ಹಿಡಕಲ ಡ್ಯಾಮ್ ಹೆಚ್ ಡಿ ಪಿ ಶಾಲಾ ಮಕ್ಕಳು ಸ್ವಾಗತ ಗೀತೆ ಹಾಡಿದರು, ಅದೇ ಶಾಲೆಯ ಸಹ ಶಿಕ್ಷಕ ಜಗನ್ನಾಥ ಕರೆನ್ನವರ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.

ಹುಕ್ಕೇರಿ ತಾಲೂಕ ಛಾಯಾಗ್ರಾಹಕರ ಸಂಘದ ಸುಮಾರು 120 ಕಿಂತ ಅಧಿಕ ಸದಸ್ಯರು ತಮ್ಮ ಲೇಬರ್ ಕಾರ್ಡ್ ನೋಂದಣಿ ಮಾಡಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭದಲ್ಲಿ ಹು, ತಾ, ವೃ, ಛಾಯಾಗ್ರಾಹಕರ ಸಂಘದ ಸರ್ವ ಸದಸ್ಯರು, ಆಡಳಿತ ಮಂಡಳಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";