ಬೆಳಗಾವಿ: ವಿದ್ಯೆ ಯಾರೂ ಕದಿಯಲಾರದ ಹಾಗೂ ಪಾಲು ಕೇಳದ ಶಾಶ್ವತ ಆಸ್ತಿ. ವಿದ್ಯೆಯೇ ಬದುಕನ್ನು ಪರಿಪೂರ್ಣದತ್ತ ಕೊಂಡೊಯ್ಯುವ ಅಸ್ತ್ರ ಆದ್ದರಿಂದ ವಿದ್ಯೆ ಪಡೆದು ಪ್ರಜ್ಞಾವಂತ ಪ್ರಜೆಗಳಾಗಿ ಎಂದು ಡಾ ಪ್ರಜ್ಞಾ ಮತ್ತಿಹಳ್ಳಿ ಯವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಅವರು ದಿ. 13 .03.2025 ರಂದು ಸರಕಾರಿ ಪ್ರೌಢಶಾಲೆ ತುರಕರ ಶೀಗಿಹಳ್ಳಿಯಲ್ಲಿ ನಡೆದ 2024- 25 ನೇ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಉಪನ್ಯಾಸ ನೀಡಿದರು.
ಮುಂಜಾನೆ 11 ಗಂಟೆಗೆ ಎಚ್ ಆಯ್ ಮುಲ್ಲಾನವರ ಮುಖ್ಯೋಪಾಧ್ಯಾಯರು ಇವರ ಅಧ್ಯಕ್ಷ ತೆಯಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ಮೂಡಿಬಂತು. ಸರಸ್ವತಿ ಪೂಜೆಯೊಂದಿಗೆ ಉದ್ಘಾಟನೆಗೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಸವಿನೆನಪುಗಳನ್ನು ಹಂಚಿಕೊಂಡರು.ಶಿಕ್ಷಕರು ಮಕ್ಕಳಿಗೆ ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಶಂಕರ ಕುಂಬಾರ ಸ್ವಾಗತಿಸಿದರು,ಮೀನಾಕ್ಷಿ ಸೂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಜಾತಾ ಪಾಟೀಲ್ ನಿರೂಪಿಸಿದರು.
ರೂಪಾ ಬೀಜಲಿ ವಂದಿಸಿದರು.
ಇನ್ನುಳಿದಂತೆ ಗ್ರಾಮದ ಗಣ್ಯರಾದ ಚಂದ್ರು ಕಡೆಮನಿ, ಮಲ್ಲನಗೌಡಾ ಪಾಟೀಲ್ ಹಾಜರಿದ್ದರು.ಶಿಕ್ಷಕರಾದ
ಆರ್,ಪಿ,ಮರಕುಂಬಿ, ಮಾರುತಿ ಪಾಟೀಲ್,ಶಿವು ಗುತ್ತೆಪ್ಪನವರ, ಪ್ರೀತಿ ವಜ್ರಮಟ್ಟಿ,ಕಿರಣ್ ಪೂಜಾರ್, ಶ್ವೇತಾ ಕಂಬಿ ಹಾಗೂ ಎಲ್ಲ ಮಕ್ಕಳೂ ಹಾಜರಿದ್ದರು. ವರ್ಷವಿಡಿ ಶಾಲಾ ಕಾರ್ಯಕ್ರಮಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು.