ನಾವಿಂದು ವಸ್ತುವಿಗೆ ಬೆಲೆ ಕೊಟ್ಟಿದ್ದೇವೆ, ಆದರೆ ಬದುಕಿಗೆ ಬೆಲೆ ಕೊಟ್ಟಿಲ್ಲ. ವಸ್ತುವೇ ಬದುಕು ಅಂದುಕೊಂಡಿದ್ದೇವೆ.
*********************************************
ಒಬ್ಬ ಯುವಕ ಹೊಸ ಬೂಟು ತಂದಾನೆ, ಏನು ಚಂದ ಇವೆ. ಬೆಲೆ ಲಕ್ಷ ರೂಪಾಯಿ, ಮಾವ ಮದುವೆಗೆ ಕೊಡಿಸಿದ್ದು. Made in Italy. ಆದರೆ ಅವು ಕಾಲಿಗೆ ತೊಡಾವು, ಕಾಲಿಗೆ ಬೂಟು ಸರಿಯಾಗಿ ಹೊಂದಾಕೆ ಒಲ್ಲವು. ಆದರೆ ಇವನೇ ಬೂಟಿಗೆ ಕಾಲು ಹೊಂದಿಸ್ಯಾನ, ಬೂಟು ಕಾಲಿಗೆ ಚುಚ್ಚುತಾವೆ, ನಡೆಯೋಕೆ ತ್ರಾಸ್ ಆಗ್ಯಾವ, ಆದ್ರೂ ಇವನು ಬೂಟು ಕಳಚಂಗಿಲ್ಲ. ಏಕೆಂದರೆ ಅವುಗಳ ಬೆಲೆ ಲಕ್ಷ! Made in Italy.
ಕಾಲು ಹೇಳ್ತದೆ: “ತಗೆ ಬೂಟನ್ನ ನಾನು ಮುಖ್ಯಾನೋs, ಬೂಟು ಮುಖ್ಯಾನೋs. ಕಾಲು ಇರೋದಿಕ್ಕೆ ಬೂಟು ಇದ್ದಾವೆ, ಬೂಟು ಇರೋದಿಕ್ಕೆ ಕಾಲಿಲ್ಲ ಇದನ್ನು ತಿಳಕೋ” ಬೂಟು ಹೋದಾವು ಮತ್ತೆ ಬಂದಾವು. ಆದರೆ ಕಾಲೇ ಹೋದರೆ? ಕಾಲಿಗೆ ಇರೋ ಬುದ್ಧಿ ತೆಲೆಗೆ ಇಲ್ಲ. ಯಾವುದು ಮುಖ್ಯ ಅಂತ ತಿಳಿದಿಲ್ಲ.
ಜೀವನದಲ್ಲಿ ವಸ್ತುಗಳೇ ಮುಖ್ಯ ಅಂದುಕೊಂಡಿದ್ದೇವೆ. ವಸ್ತುಗಳೇ ಜೀವನ ಅಂದುಕೊಂಡಿದ್ದೇವೆ.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು
ಸಂಗ್ರಹ:- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ