ಹುಕ್ಕೇರಿ: ತಾಲೂಕಿನ ಕನ್ನಡ ಜಾನಪದ ಪರಿಷತ್ತಿನ ತಾಲೂಕು ಘಟಕ ಹುಕ್ಕೇರಿಯವರು ಇಂದು ಸಂಜೆ 6:00 ಗಂಟೆಗೆ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಡೊಳ್ಳಿನ ಹಾಡಿನ ಮುಖಾಂತರ ಪ್ರಾರ್ಥನೆ ಮಾಡಿ ಕಾರ್ಯಕ್ರಮ ಪ್ರಾರಂಭಿಸಿದರು. ಮತ್ತು ಜನಪದ ವಾದ್ಯವಾದ ದಕ್ಕವನ್ನು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸುಭಾಸ್ ನಾಯಿಕ್ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಹೇಳಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಗಣ್ಯರಿಗೂ ಸತ್ಕರಿಸಿ ಸನ್ಮಾನಿಸಲಾಯಿತು. ವಿಶೇಷ ಎಂದರೆ, ಹೆಣ್ಣುಮಕ್ಕಳಿಗೆ ಉಡಿ ತುಂಬುವ ನಮ್ಮ ಸಂಸ್ಕೃತಿಯಂತೆ ಶ್ರೀಮತಿ ಪ್ರಭಾವತಿ ಪಾಟೀಲ ಅವರಿಗೆ ಉಡಿಯ ತುಂಬಿ ಗೌರವಿಸಲಾಯಿತು. ಕೆ.ಎಸ್.ಕೌಜಲಗಿಯವರು ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಗಳು ಕೆವಲ ಆಚರಣೆಗಳಲ್ಲು ಅದು ಒಂದು ವಿಜ್ಞಾನ ಎಂದು ಸ್ಪಷ್ಟಿಪಡಿಸಿದರು. ವಿವಿಧ ಜನಪದ ಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ಸನ್ಮಾನ್ಯ ಕಾಕಡೆಯವರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಶ್ರೀಯುತ ಎಸ್.ಬಾಲಾಜಿಯವರು ಮಾತನಾಡುತ್ತಾ ಜನಪದವನ್ನು ಬಳಸಿ ಮತ್ತು ಬೆಳಸಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಗಾಯನ, ವಾದನವನ್ನು ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮ.ಮ.ನಿ.ಪ್ರ.ಚಂದ್ರಶೇಖರ ಮಹಾಸ್ವಾಮಿಗಳು, ಬಾಲಾಜಿಯವರು, ಮೋಹನ್ ಗುಂಡ್ಲುರ್, ಪ್ರಭಾವತಿ ಪಾಟೀಲ, ಎ.ಕೆ.ಪಾಟೀಲ, ಶಿತಲ್ ಬ್ಯಾರಿ, ಮಹಾವೀರ ನಿಲಜಗಿ, ಸುಭಾಷ್ ನಾಯಿಕ್, ಮಂಜುನಾಥ ಮಹಾರಾಜರು ಸೇರಿದಂತೆ ಹಲವಾರು ಗಣ್ಯರ ಹುಕ್ಕೇರಿಯ ಸಾರ್ವಜನಿಕರು ಮತ್ತು ಕಲಾವಿದರು ಭಾಗವಹಿಸಿದ್ದರು.