ಹುಕ್ಕೇರಿ: ತಾಲೂಕಿನ ಮಾವನೂರ್ ಗ್ರಾಮದೇವಿ ಶ್ರೀ ಬಂಡೆಮ್ಮಾದೇವಿ, ಶ್ರೀ ಗುಡದವ್ವ ಹಾಗೂ ಶ್ರೀ ಬನದವ್ವದೇವತೆಯರ ಜಾತ್ರಾ ಮಹೋತ್ಸವಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ, ಭಕ್ತಿಯಿಂದ ನಡೆಯಿತು.
5 ವರ್ಷಗಳ ಬಳಿಕ ನಡೆಯುತ್ತಿರುವ ಮಾವನೂರು ಗ್ರಾಮದ ಆರಾಧ್ಯ ಗ್ರಾಮದೇವಿ ಶ್ರೀ ಬಂಡೆಮ್ಮಾದೇವಿ, ಶ್ರೀ ಗುಡದವ್ವ ಹಾಗೂ ಶ್ರೀ ಬನದವ್ವದೇವತೆಯರ ಜಾತ್ರಾ ಮಹೋತ್ಸವ ದಿ. 18ರಂದು ಮುಂಜಾನೆ ಬಂಡಮ್ಮ ದೇವಿ ಪ್ರಾಣ ಪ್ರತಿಷ್ಠಾಪನೆ ದೇವಿಗೆ ಉಡಿ ತುಂಬುವುದು, ಹಾಗೂ ಭವ್ಯ ರಥೋತ್ಸವ ಬಡಿಗೇರ್ ಮನೆಯಿಂದ ಬಸ್ ಸ್ಟ್ಯಾಂಡ್ ವರಗೆ ಅದ್ದೂರಿಯಾಗಿ ನಡೆಯಿತು.
ರಾತ್ರಿ ಜಗಜ್ಯೋತಿ ಬಸವೇಶ್ವರ ಭಕ್ತಿ ಪ್ರಧಾನ ನಾಟಕ
19 ರಂದು ಬಸ್ ಸ್ಟ್ಯಾಂಡ್ ಇಂದ ಬಂಡಮ್ಮಾ ದೇವಿ ದೇವಸ್ಥಾನದವರೆಗೆ ರಥೋತ್ಸವ ಹಾಗೂ ರಾತ್ರಿ ಗರತಿ ಹೆಣ್ಣಿಗೆ ಗರ್ಭದ ಗಂಡ ಎಂಬ ಸಾಮಾಜಿಕ ನಾಟಕ ನಡೆಯಿತು.
20 ರಂದು ಒಂದು ಎತ್ತು ಒಂದು ಕುದುರೆ ಮತ್ತು ಜೋಡೆತ್ತಿನ ಗಾಡಿ ಶರ್ತು ಹಾಗೂ ರಾತ್ರಿ ರಾಧಾಕೃಷ್ಣ ಬಯಲಾಟ ಹಾಗೂ 21ರಂದು ಮುಂಜಾನೆ ಓಡುವ ಸ್ಪರ್ಧೆ, ಸೈಕಲ್ ಸ್ಪರ್ಧೆ ಜೋಡು ಕುದುರೆ ಗಾಡಿ ಶರ್ತು ಹಾಗೂ ರಾತ್ರಿ ತಾಯಿಯ ಋಣ ಮಣ್ಣಿನ ಗುಣ ಎಂಬ ಸುಂದರ ಸಾಮಾಜಿಕ ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರಗಿದವು.