ಹುಕ್ಕೇರಿ: ತಾಲೂಕಿನ ಹಿರಣ್ಯಕೇಶಿ ನದಿ ದಡದಲ್ಲಿರುವ ಶ್ರೀ ಹೊಳೆಮ್ಮಾ ದೇವಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸಿ ನದಿಯಲ್ಲಿ ಉಪ್ಪಿನ ಸಾನ್ನಕ್ಕೆ ನೀರಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ದೇವಿಯ ದರ್ಶನಕ್ಕೆ ಬಂದ ಭಕ್ತರು ಹಿರಣ್ಯಕೇಶಿ ಉಪ್ಪಿನ ನದಿ ನೀರಿನಿಂದ ಸ್ಥಾನ ಮಾಡಿದರೆ ಅವರಿಗೆ ಚರ್ಮ ಕಾಯಿಲೆಗಳು ಮಾಯವಾಗುತ್ತವೆ ಎಂದು ಭಕ್ತರ ನಂಬಿಕೆ.
ಅದೇ ರೀತಿ ಇಂದು ಭಾನುವಾರ ಅಮಾವಾಸ್ಯೆ ದಿನದಂದು ನೂರಾರು ಭಕ್ತರು ಶ್ರೀ ಹೊಳೆಮ್ಮಾ ದೇವಿಯ ದಡದಲ್ಲಿ ಹಿರಣ್ಯಕೇಶಿ ನದಿಯಲ್ಲಿ ಇರುವ ದೇವಿಗೆ ಉಪ್ಪು ಹಾಕಿ ಕೈ ಕಾಲು ತೊಳೆದುಕೊಳ್ಳಲು ಪದ್ದತಿಯಂತೆ ಹಿರಣ್ಯಕೇಶಿ ನದಿಯಲ್ಲಿ ಭಕ್ತರು ಅಲ್ಲಿ ಇಲ್ಲಿ ನೀರು ಹುಡುಕುತ್ತಿರುವ ದೃಶ್ಯಗಳು ಕಂಡುಬಂದವು.
ಬಿಸಿಲಿನ ತೀವ್ತತೆಗೆ ಶ್ರೀ ಹೊಳೆಮ್ಮ ದೇವಿ ಹತ್ತಿರದ ಹಿರಣ್ಯಕೇಶಿ ನದಿಯ ಬಾಂದಾರದಲ್ಲಿ ನದಿ ಬತ್ತಿರುವುದರಿಂದ ಭಕ್ತರಿಗೆ ಸ್ಥಾನ ಮಾಡಲು ನೀರಿಲ್ಲ ಪರಿಸ್ಥಿತಿ ಉಂಟಾಗಿದೆ.
ವರದಿ:ಕಲ್ಲಪ್ಪ ಪಾಮನಾಯಿಕ್