Live Stream

[ytplayer id=’22727′]

| Latest Version 8.0.1 |

Local NewsState News

🌻 ಕಥೆ: ಅತಿ ಆಸೆ ಸರ್ವ ನಾಶಕ್ಕೆ ಕಾರಣ🌻

🌻 ಕಥೆ: ಅತಿ ಆಸೆ ಸರ್ವ ನಾಶಕ್ಕೆ ಕಾರಣ🌻

ಸೃಷ್ಟಿಯಲ್ಲಿ ಯಾರಿಗೂ ಯಾವ ಚ್ಯುತಿಯು ಬರದಂತೆ ನಿಸರ್ಗ ಎಲ್ಲವನ್ನೂ ಬಳಿಸಿಕೊಂಡು ಬಂದಿದೆ. ತಲತಲಾಂತರದಿಂದ ಕ್ರಿಮಿ ಕೀಟಾದಿಯಾಗಿ , ಪಕ್ಷಿ , ಪ್ರಾಣಿ, ಸೇರಿ ಮಾನವನ ಏನೆಲ್ಲಾ ಅವಶ್ಯಕತೆ ಗಳನ್ನೂ ಪೂರಯ್ಯಸಲು ಪ್ರಕೃತಿ ಹಿಂಜರಿದಿಲ್ಲ . ಈ ಎಲ್ಲವನ್ನೂ ಸೃಷ್ಟಿಸಿದ , ಸಾಕಾರವೆನಿಸಿದ ಆ ಮೂಲ ಭೂತ ಶಕ್ತಿಯನ್ನು ನೀವು ಎನೆಂದಾದರೂ ಕರೆಯಿರಿ ಭಗವಂತ ಅಂತ ಅನ್ನದಿದ್ದರೂ ಪರವಾಗಿಲ್ಲ. ಆ ಶಕ್ತಿ ನಿಸ್ವಾರ್ಥತೆಯಿಂದ ಸಕಲರ ಅಭಿವೃದ್ಧಿಯನ್ನೇ ಅದು ಬಯಸುತ್ತದೆ ಆದರೆ ಅವರ ವಿನಾಶವನ್ನಲ್ಲ .

ಎಂದಾದರೂ ನಾವುಗಳು ಕ್ರಿಮಿಗಳು, ಪ್ರಾಣಿಗಳು, ಪಕ್ಷಿಗಳು, ಸುಮ್ಮನೆ ಕುಳಿತು ಕಾಲ ಹರಣ ಮಾಡುತ್ತ, ಪ್ರಾರ್ಥನೆ, ಪ್ರಾರ್ಥನೆ ಎಂದು ಭಗವಂತನ ಎದುರಿಗೆ ಅಡ್ಡ ಬಿದ್ದು ನಮಗೆ ಅದು ಬೇಕು ಇದು ಬೇಕು ಎಂದು ಬೇಡಿದ್ದನ್ನು ಎಂದಾದರೂ ಕಂಡಿರುವಿರಾ. ಸೃಷ್ಟಿಯಲ್ಲಿ ಎಲ್ಲ ಸೃಷ್ಟಿಗಳಿಗಿಂಥ ಮಾನವನ ಸೃಷ್ಟಿ ಅತಿ ಉತ್ತಮವಾದದ್ದು. ಈ ಆಧುನಿಕ ಮಾನವ ಭಗವಂಥನೋ ಇಲ್ಲ ಪ್ರಕೃತಿಯೋ ಕೊಟ್ಟಿರುವುದನ್ನು ಉಪಯುಕ್ತವಾಗಿ ಉಪಯೋಗಿಸಿ ಕೊಳ್ಳುವುದರ ಬದಲು ಮತ್ತೆ ಮತ್ತೆ ತಿರುಪತಿ ತಿಮ್ಮಪ್ಪನಿಗೋ , ಏಸು ಕ್ರಿಸ್ತನಿಗೋ, ಹರಕೆ ಹೊತ್ತು ಅದು ಕೊಡು ಇದು ಕೊಡು ಎಂದು ಬೇಡಿ ಕೊಳ್ಳುವುದು ಸಹಜವಾಗಿದೆ .

ಈ ಕೆಳಗಿನ ಕಥೆ ಇಂತಹ ಒಂದು ಉದಾಹರಣೆ . ಭಕ್ತನೊಬ್ಬ ಭಗವಂತನನ್ನು ಪ್ರಾರ್ಥಿಸಿ ತನಗೆ ಬೇಕಾದುದೆಲ್ಲವನ್ನು ತಾನು ಕೇಳಿದ ಒಡನೆ ದೊರಕಬೇಕು ಮತ್ತು ನಾನು ಹೇಳಿದ ಕೆಲಸಗಳು ತಾನು ಹೇಳಿದ ತಕ್ಷಣ ಜರುಗಬೇಕು ಹಾಗೆ ನಡೆಸಿ ಕೊಡುವ ಒಬ್ಬನನ್ನು ನನಗೆ ವರವಾಗಿ ಕರುಣಿಸು. ನೋಡು ಆಲೋಚನೆ ಮಾಡು ನಾನು ನಿನಗೆ ವರವನ್ನು ಕೊಡುವೆ ಅದರ ಫಲಾ ಫಲಗಳನ್ನು ನೀನು ಅನುಭವಿಸುವುದಕ್ಕೆ ತಯಾರಿದ್ದರೆ ನಿನಗೆ ನಾನು ವರವನ್ನು ಕೊಡುತ್ತೇನೆ. ಭಕ್ತನು ಬಹಳ ಸಂತೋಷದಿಂದ ಆಗಲಿ ಎಂದಾಗ, ಭಗವಂತನು ಅವನ ಹತ್ತಿರ ಒಂದು ಭೂತವನ್ನು ಕಳುಹಿಸಿದನು.

ಭಕ್ತನಿಗೆ ಖುಷಿಯೋ ಖುಷಿ, ಆ ಭೂತನಿಗೆ ನನಗೆ ಒಂದು ದೊಡ್ಡ ಅರಮನೆ ಬೇಕು ಎಂದಾಗ ಆ ಭೂತ ತಕ್ಷಣ ಅವನಿಗೆ ಒಂದು ಅರಮನೆಯನ್ನು ಕಟ್ಟಿಸಿತು. ನನಗೆ ಪಂಚ ಭಕ್ಷ ಪರಮಾನ್ನ ಬೇಕು ಅಂದಾಗ ಅದು ಅವನ ಮುಂದೆ ಬಂತು, ನನಗೆ ಮುತ್ತು, ವಜ್ರ ಬಂಗಾರ ಒಡವೆಗಳು ಬೇಕು ಅಂದಾಗ ಅವುಗಳೂ ಅವನ ಮುಂದೆ ಪ್ರತ್ಯಕ್ಷ ವಾಯಿತು . ಆದರೆ ಆ ಭೂತ ಭಕ್ತನಿಗೆ ಒಂದಾದ ಮೇಲೆ ಒಂದು ಕೆಲಸ ಕೊಡು ಮತ್ತು ಕೊಡುತ್ತಲೇ ಇರಬೇಕು ನನಗೆ ಸುಮ್ಮನೆ ಇರಲು ಸಾಧ್ಯವಿಲ್ಲ ನೀನು ನನಗೆ ಒಂದಾದ ಮೇಲೆ ಒಂದು ಕೆಲಸ ಕೊಡುತ್ತಿರಲೇಬೇಕು ಎಂದಾಗ ಈ ಭಕ್ತನಿಗೆ ಏನು ಮಾಡುವುದೆಂದು ತಿಳಿಯಲಿಲ್ಲ.

ಭಕ್ತನಿಗೆ ಬೇರೆ ಯಾವ ಕೆಲಸವೂ ಮಾಡಲು ಆ ಭೂತ ಬಿಡದೆ ನೀನು ನನಗೆ ಪುರುಸೊತ್ತಿಲ್ಲದೆ ಕೆಲಸ ಕೊಡುತ್ತಿರಬೇಕು ಇಲ್ಲದಿದ್ದರೆ ನಿನ್ನನು ನಾನು ಮುಗಿಸಿ ಬಿಡುವೆ ಎಂದು ಹೆದರಿಸಿತು. ಆ ಭಕ್ತ ಊಟ ಮಾಡುವುದಕ್ಕೂ ಮತ್ತು ಬೇರೆ ಏನು ಕೆಲಸ ಮಾಡುವುದಕ್ಕೂ ಈ ಭೂತ ಬಿಡಲಿಲ್ಲ . ಆಗ ಆ ಭಕ್ತನಿಗೆ ತಾನು ಅದು ಬೇಕು ಇದು ಬೇಕು ಎಂದು ಭಗವಂತನನ್ನು ಕೇಳಿದ್ದು ತನಗೆ ಕಷ್ಟ ವಾಯಿತು ಎಂದು ಮತ್ತೆ ಭಗವಂತನನ್ನು ಪ್ರಾರ್ಥಿಸುತ್ತ ದಯವಿಟ್ಟು ಈ ಭೂತದಿಂದ ನನಗೆ ಬಿಡುಗಡೆ ಕೊಡಿಸು ಈ ಭೂತಕ್ಕೆ ಕೆಲಸ ಹೇಳುವುದು ನನಗೆ ಅಸಾಧ್ಯ ನನಗೆ ಏನು ಬೇಡ ಈಗ ನನಗಿರಿವುದೇ ಸಾಕು ಎಂದನು . ಆಗ ಭಗವಂತ ಆ ಭೂತವನ್ನು ಕರೆದು ನೋಡು ಅಲ್ಲಿ ನಿಂತಿರುವ ನಾಯಿಯ ಬಲವನ್ನು ನೆಟ್ಟಗೆ ಮಾಡು ಎಂದು ಹೇಳಿ ಅ ಭಕ್ತನನ್ನ್ನುಭೂತದ ಕಷ್ಟದಿಂದ ಪಾರು ಮಾಡಿದನು.

ಇದರಿಂದ ನಾವು ಕಲಿಯ ಬೇಕಾದ ಪಾಠ , ಎಲ್ಲರಿಗೂ ಅವರ ಅವರ ಕರ್ಮಕ್ಕೆ ಅನುಗುಣವಾಗಿ ಫಲ ದೊರೆಯುವುದು ಸಹಜ. ಅದಕ್ಕಿಂತ ಹೆಚ್ಚು ಆಶಿಸಿದಲ್ಲಿ ಅದು ದೊರಕಿದರು ದಕ್ಕುವುದು ಕಷ್ಟ. ಪುರಾಣ ಪುಣ್ಯ ಕಥೆಗಳನ್ನು ಕೇಳಿದ್ದೀರಿ ಸಹಸ್ರಾರು ರಾಕ್ಷಸರಾದ್ಯಾಗಿ ತಮ್ಮ ತಪಸ್ಸಿನ ಫಲದಿಂದ ಬೇಡಬಾರದ ವರಗಳನ್ನು ಬೇಡಿ ಅದನ್ನು ಅನುಭವಿಸಲಾಗದೇ ಕಷ್ಟ ಪಟ್ಟು ಪಶ್ಚಾತ್ತಾಪ ಕಂಡಿರುತ್ತಾರೆ. ಭಗವಂತ ಬೇಡಿದರೆ ಕೊಡದೆ ಇರುವುದಿಲ್ಲ. ಆದರೆ ತಾನಾಗಿಯೇ ನಮ್ಮ ಕರ್ಮದ ಫಲದಿಂದ ಬಂದದ್ದನ್ನು ಅನುಭವಿಸುವ ಶಕ್ತಿ ಕೊಟ್ಟಿರುತ್ತಾನೆಯೇ ಹೊರತು , ಬೇಡಿ ಪದೆದ್ದದ್ದನು ಅನುಭವಿಸುವ ಶಕ್ತಿ ಕೊಡುವುದಿಲ್ಲ ಹಾಗಾಗಿ ಅದನ್ನು ನಾವೇ ನಿಭಾಯಿಸ ಕೊಳ್ಳಬೇಕು ಆದರೆ ಅದು ಸಾಧ್ಯವಿಲ್ಲದ ಮಾತು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";