ಹುಕ್ಕೇರಿ: ತಾಲೂಕಿನ ಯಮಕನಮರಡಿಯ ನುಲಿಬಾವಿ ಗಲ್ಲಿಯಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ 17ನೇ ವರ್ಷದ ಶ್ರೀ ಸಾಯಿಬಾಬಾ ಜಾತ್ರಾ ಮಹೋತ್ಸವ ದಿನಾಂಕ 30/4/25 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಡಗರ ಸಂಭ್ರಮದಿಂದ ಜರಗಲಿದೆ. ಬುಧವಾರ ಎಪ್ರಿಲ್ 30ರಂದು ಶ್ರೀ ಸಾಯಿಬಾಬಾ ಮೂರ್ತಿಗೆ ಬೆಳಗಿನ ಜಾವ 6:00ಗಂಟೆಗೆ ವಿಶೇಷ ಪೂಜೆ ಮತ್ತು ಕಾಕಡಾರತಿ ಮತ್ತು 8 ಗಂಟೆಗೆ ಅಭಿಷೇಕ ಜರುಗುವುದು 12:30 ಗಂಟೆಗೆ ಮಹಾಪ್ರಸಾದ ಇರುವುದು.
ಈ ಜಾತ್ರ ಕಾರ್ಯಕ್ರಮದಲ್ಲಿ ಕಾರಿಮಠದ ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು ಮತ್ತು ದೊಡ್ಡ ಲಾಲಸಾಬ್ ವಲ್ಲಿ ಅಜ್ಜನಶಿಷ್ಯರು ಭಾಗವಹಿಸುವರು ಹಾಗೂ ಊರಿನ ಹಿರಿಯ ಗಣ್ಯಮಾನ್ಯರು ಈ ಜಾತ್ರಾ ಭಾಗವಹಿಸುವಲ್ಲಿದ್ದಾರೆ ಎಂದು ದುಂಡಪ್ಪ ಶಿವಪ್ಪ ಹಳ್ಳಿ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:ಕಲ್ಲಪ್ಪ ಪಾಮನಾಯಿಕ್