ಬೆಳಗಾವಿ: ನಗರದ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರಕ್ಕೆ ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ರೂಪ. ಚನಗೌಡ. ಪಾಟೀಲ ಸಾಧನೆಗೈದ ವಿದ್ಯಾರ್ಥಿಗೆ ಗೌರವ ಸತ್ಕರಿಸಿ ರೇಡಿಯೋ ಸಂದರ್ಶನವನ್ನು ಮಾಡಲಾಯಿತು.
ಸಂದರ್ಶನದಲ್ಲಿ, ಕುಮಾರಿ ರೂಪ. ಪಾಟೀಲ ತಾನು ನಡೆದು ಬಂದ ಹಾದಿಯ ಕುರಿತು ಮೆಲಕು ಹಾಕಿದಳು. ತುಂಬಾ ಪರಿಶ್ರಮದಿಂದ ಅಮ್ಮ-ಅಪ್ಪನ ಕಷ್ಟ ನೋಡಿ ಅವರಿಗೆ ಒಳ್ಳೆ ಜೀವನ ಕಲ್ಪಿಸಲು ಈ ಹಠ ನನ್ನಲ್ಲಿ ಬಂತು. ಜೊತೆಗೆ ಸರಕಾರಿ ಶಾಲೆಗಳಿಗೆ ಉತ್ತಮ ಪ್ರಜೆಗಳನ್ನ ಹುಟ್ಟು ಹಾಕುವ ತಾಕತ್ತಿದೆ. ಕಾನ್ವೆಂಟ್ ಶಾಲೆಗಳಲ್ಲಿ ಸಿಗದ ಕೆಲವು ಸೌಲಭ್ಯಗಳು ಈಗ ಸರಕಾರಿ ಶಾಲೆಗಳಲ್ಲಿ ಸಿಗುತ್ತಿವೆ. ನಾನು ಕೂಡ ಅಂತಹುದ್ದೆ ಶಾಲೆಯ ವಿದ್ಯಾರ್ಥಿನಿ ಎಂದು ಸಂದರ್ಶನದಲ್ಲಿ ಹೇಳಿದಳು. ಜೊತೆಗೆ ಭವಿಷ್ಯದ ಕುರಿತು ಪ್ರಶ್ನಿಸಿದಾಗ, ತಾನು ಮುಂದೆ ಒಳ್ಳೆಯ ವೈದ್ಯಳಾಗಿ ಜನರ ಸೇವೆಯಲ್ಲಿ ನಿರತರಾಗಬೇಕೆಂಬುದೇ ನನ್ನ ಅಭಿಲಾಷೆ ಎಂದು ತಿಳಿಸಿದಳು. ಹಾಗೂ ಈಗಿನ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ಇದ್ದರೂ ಸಾಮಾಜಿಕ ಜಾಲತಾಣಗಳ ಮೂಲಕ ಅವರು ಹಿಂದುಳಿಯುತ್ತಿದ್ದಾರೆ. ಅದನ್ನು ಬಿಟ್ಟು ಛಲ ಹಾಗೂ ಹಠದಿಂದ ಸಾಧಿಸಿದರೆ ನನ್ನ ಹಾಗೆ ಅವರು ಸಹ ಯಶಸ್ಸು ಕಾಣಲು ಸಾಧ್ಯ ಎಂದು ಕೇಳುಗ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದಳು.
ಈ ವೇಳೆ, ಮಹಿಳಾ ಕಲ್ಯಾಣ ಸಂಸ್ಥೆಯ ಸಂಸ್ಥಾಪಕಾರಾದ ಎಂ.ಎಸ್.ಚೌಗಲಾ, ಗೌರವ ಕಾರ್ಯದರ್ಶಿ ಮಹಿಳಾ ಕಲ್ಯಾಣ ಸಂಸ್ಥೆಯ ವೈಜಯಂತಿ.ಎಂ.ಚೌಗಲಾ, ಸ.ಹಿ.ಪ್ರಾ.ಶಾಲೆ ಚಿಕ್ಕ ಹಟ್ಟಿಹೋಳಿಯ ಮುಖ್ಯೋಪಾಧ್ಯಾಯರಾದ ಸುಶೀಲಾ. ಪಾಟೀಲ, ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ಸಿಬ್ಬಂದಿಗಳಾದ ಆರ್.ಜೆ. ಮೀರಾ ಹಾಗೂ ಆರ್.ಜೆ. ಚೇತನ ಉಪಸ್ಥಿತರಿದ್ದರು.