ವಿಜಯನಗರ: ಜಿಲ್ಲೆ ಕೊಟ್ಟೂರು ತಾಲೂಕಿನ ಹ್ಯಾಳ್ಯ ಗ್ರಾಮದ ಛಲವಾದಿ ಮಹಾ ಸಭಾದ ತಾಲೂಕು ಅಧ್ಯಕ್ಷರಾದ ಡಿ, ಮಂಜುನಾಥ ರವರು ಮಾತನಾಡಿ, ರಾಜ್ಯಸರ್ಕಾರ
ದಿನಾಂಕ ಮೇ 5,2025 ರಿಂದ ನಡೆಸಲಿರುವ ಒಳಮೀಸಲಾತಿ ಸಮೀಕ್ಷೆಯಲ್ಲಿ ರಾಜ್ಯ ಸರ್ಕಾರ ತಾಲ್ಲೂಕಿನ ಎಲ್ಲಾ ಛಲವಾದಿ ಜನಾಂಗದ ವರನ್ನು ತಮ್ಮ ಉಪಜಾತಿ ಕಾಲಂನಲ್ಲಿ “ಛಲವಾದಿ” ಎಂದು ನಮೂದಿ ಸಬೇಕೆಂದು,ಹೇಳಿದರು.
ಈ ಮೂಲಕ ಮುಂದಿನ ನಮ್ಮ ಸಮುದಾಯದ ಮಕ್ಕಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಲಾಭ ಪಡೆಯಲು ನಮ್ಮ ಸಮುಧಾಯದ ಜನಾಂಗದವರು ಜಾಗೃತರಾಗಿ ತಪ್ಪದೇ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.