ಮೈಸೂರು: ಮಾತಾ ಅಮೃತಾನಂದಮಯಿ ಮಠ ಮೈಸೂರು, ಬ್ಯಾಂಕ್ ನೋಟ್ ಪೇಪರ್ ಬಸ್ ಇಂಡಿಯಾ ಪ್ರೈ. ಲಿ ಮೈಸೂರು, ವಿಶ್ವ ಹಿಂದೂ ಪರಿಷತ್, ಎಸ್. ಎಸ್. ಫೌಂಡೇಶನ್ ಬೆಂಗಳೂರು, ಧರ್ಮ ಪ್ರಸಾರ ವಿಭಾಗ, ಏಕಲ್ ಗ್ರಾಮೋಥಾನ್ ಫೌಂಡೇಶನ್ಇವರ ಸಹಯೋಗದೊಂದಿಗೆ, ಶನಿವಾರ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಹುಣಸೂರು ತಾಲೂಕಿನ ರಂಗಯ್ಯನ ಕೊಪ್ಪಲು ಆಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ವಿಶೇಷವಾಗಿ ಮೊಬೈಲ್ ಆಸ್ಪತ್ರೆ ಗ್ರಾಮದಲ್ಲಿ ಬಂದು ಒಂದೇ ಜಾಗದಲ್ಲಿ ಬಿಪಿ ಶುಗರ್, ರಕ್ತ ಪರೀಕ್ಷೆ, Xray, ECG and blood pressure check. ಇತ್ಯಾದಿ ಪರೀಕ್ಷೆಗಳನ್ನು ಉಚಿತವಾಗಿ ನಡೆಯಿತು. ಈ ಶಿಬಿರದ ವಿಶೇಷತೆಯೆಂದರೆ, ಅಮೃತ ಕೃಪಾ ಆಸ್ಪತ್ರೆಯ ಮೊಬೈಲ್ ಆಸ್ಪತ್ರೆ (Mobile Hospital) ಬಸ್ಸಿನ ಮೂಲಕ ಗ್ರಾಮಕ್ಕೆ ತೆರಳಿ ಆರೋಗ್ಯ ಸೇವೆಯನ್ನು ಒದಗಿಸಲಾಯಿತು, ಇದು ಆಡಿಯ ಜನರಿಗೆ ಒಂದು ವರದಾನವಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಿಗೆ ಮತ್ತು ಹಾಡಿ ಜನಾಂಗದವರು ವಾಸಿಸುವ ಕಡೆಗಳಿಗೆ ಈ ಬಸ್ಸು ತೆರಳಿ ಉಚಿತ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ.
ದೇಶದ ಗ್ರಾಮೀಣ ಭಾಗಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆಯಿದೆ. ಆದರೆ ಕೆಲವೊಂದು ಸ್ವಯಂ ಸೇವಾ ಸಂಸ್ಥೆ, ಸರ್ಕಾರೇತರ ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸುವ ಮೂಲಕ ಸೇವೆಯನ್ನು ಸಲ್ಲಿಸುತ್ತಿವೆ. ಈ ರೀತಿಯ ಆಸ್ಪತ್ರೆಯ ಸಾಲಿಗೆ ಮಾತ ಅಮೃತ ಕೃಪಾ ಆಸ್ಪತ್ರೆ ಸೇರುತ್ತದೆ ಅವರ ಈ ಕಾರ್ಯ ಶ್ಲಾಘನೀಯ. ಅವರಿಗೊಂದು ಸಲಾಂ ಎಂದು ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್ ತಿಳಿಸಿದರು.
ಈ ಶಿಬಿರದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಂಡು ಬಂದರೆ, ಗ್ರಾಮಸ್ಥರಿಗೆ ಬೋಗಾದಿಯಲ್ಲಿರುವ ಅಮೃತ ಕೃಪಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ಮಾರ್ಗದರ್ಶನ ನೀಡಲಾಗುತ್ತದೆ. ಸಾಮಾನ್ಯವಾಗಿ ಎಕ್ಸ್-ರೇ ಅಥವಾ ಇಸಿಜಿಗೆ ಹೆಚ್ಚಿನ ವೆಚ್ಚವಾಗುತ್ತದೆ. ಆದರೆ, ಈ ಮೊಬೈಲ್ ಆಸ್ಪತ್ರೆಯಿಂದ ಗ್ರಾಮಸ್ಥರಿಗೆ ಆರ್ಥಿಕ ಹೊರೆಯಿಲ್ಲದೆ ಗುಣಮಟ್ಟದ ಸೇವೆ ದೊರೆಯುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಾದ ಶ್ರೀ ಮಹಾದೇವಪ್ಪ ರವರು ತಿಳಿಸಿದರು.
ಶಿಬಿರದಲ್ಲಿ 100ಕ್ಕೂ ಹೆಚ್ಚು ಆಡಿಗ್ರಾಮಸ್ಥರು ಭಾಗವಹಿಸಿ, ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದರು. ರೈತರು, ಮಹಿಳಾ ಸಂಘದ ಸದಸ್ಯರು, ಮತ್ತು ಸಮೀಪದ ಗ್ರಾಮಗಳ ಜನರು ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗಿಯಾದರು. ಈ ಶಿಬಿರವು ಗ್ರಾಮೀಣ ಜನರಿಗೆ ಆರೋಗ್ಯ ಸೇವೆಯನ್ನು ತಮ್ಮ ಬಾಗಿಲಿಗೆ ತಂದುಕೊಟ್ಟಿದ್ದು, ಇದರಿಂದ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ ಈ ಶಿಬಿರವು ಗ್ರಾಮೀಣ ಜನರ ಆರೋಗ್ಯದ ಕಾಳಜಿಗೆ ಒಂದು ಮಾದರಿಯಾಗಿದ್ದು, ಮೊಬೈಲ್ ಆಸ್ಪತ್ರೆಯಂತಹ ನವೀನ ಯೋಜನೆಗಳು ಆರೋಗ್ಯ ಸೇವೆಯನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸಲು ಪ್ರಾರಂಭಿಸಲಿದ್ದು, ಹೊಸ ಅತ್ಯಾಧುನಿಕ ಸೌರಶಕ್ತಿ ಚಾಲಿತ ಟೆಲಿಮೆಡಿಸಿನ್ ವ್ಯಾನ್ ಅನ್ನು ಒದಗಿಸಲಿದೆ.
ಮೈಸೂರಿನಲ್ಲಿರುವ ಮಠದ ಅಮೃತ ಕೃಪಾ ಚಾರಿಟೇಬಲ್ ಆಸ್ಪತ್ರೆಯಿಂದ ನಿರ್ಮಿಸಲಾದ ಅಮೃತದ ಟೆಲಿಮೆಡಿಸಿನ್ ವ್ಯಾನ್, ಟೆಲಿಮೆಡಿಸಿನ್ ಕನ್ಸೋಲ್, ಡಿಜಿಟಲ್ ಎಕ್ಸ್-ರೇ ಘಟಕ, 2-ಡಿ ಎಕೋಕಾರ್ಡಿಯೋಗ್ರಫಿ ಮತ್ತು ಅಲ್ಟ್ರಾಸೊನೋಗ್ರಫಿ, ಸ್ವಯಂಚಾಲಿತ ಮತ್ತು ಅರೆ-ಸ್ವಯಂಚಾಲಿತ ರಕ್ತ-ಪರೀಕ್ಷಾ ಘಟಕ ಮತ್ತು ಎಲೆಕ್ಟ್ರೋಕಾರ್ಡಿಯೋಗ್ರಾಮ್‌ನಂತಹ ಸುಧಾರಿತ ಸೌಲಭ್ಯಗಳನ್ನು ಹೊಂದಿದೆ. ಇದು ಪೋರ್ಟಬಲ್ ಸಾರಿಗೆ ಮತ್ತು ಬಿಪಾಪ್ ವೆಂಟಿಲೇಟರ್‌ನೊಂದಿಗೆ ಆಮ್ಲಜನಕ ಪೂರೈಕೆಯನ್ನು ಸಹ ಹೊಂದಿದೆ. ಉಪಕರಣವು ವಿದ್ಯುತ್ ಮತ್ತು ಪೆಟ್ರೋಲ್ ಜನರೇಟರ್ ಹಾಗೂ ಸೌರಶಕ್ತಿಯಿಂದ ಬೆಂಬಲಿತವಾಗಿದೆ. ಅಮೃತ ವಿಶ್ವವಿದ್ಯಾಲಯದ ನ್ಯಾನೋ-ಸೌರ ಕೇಂದ್ರದಿಂದ ಅಭಿವೃದ್ಧಿಪಡಿಸಲ್ಪಟ್ಟಿದೆ,ಈ ಶಿಬಿರದ ಜೊತೆಗೆ ಗ್ರಾಮೀಣ ಸಮುದಾಯಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ
ಭಾರತ್ ಸೇವಕ ಸಮಾಜದ ಸಹಯೋಗದೊಂದಿಗೆ, ಆಸ್ಪತ್ರೆಯು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳಾ ವಿದ್ಯಾರ್ಥಿನಿಯರಿಗೆ ಆರೋಗ್ಯ ರಕ್ಷಣೆಯಲ್ಲಿ ವೃತ್ತಿಪರ ತರಬೇತಿ ಕೋರ್ಸ್‌ಗಳನ್ನು ಸಹ ನಡೆಸುತ್ತಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ ಸೌಮ್ಯರವರು ಮಾಹಿತಿ ನೀಡಿದರು.
ಈ ಶಿಬಿರದಲ್ಲಿ ಆಸ್ಪತ್ರೆ ವೈದ್ಯರಾದ ಡಾ ಸೌಮ್ಯ, ಸಿಬ್ಬಂದಿಗಳು ,ಕಾರ್ಯಕರ್ತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಾದ ಮಹಾದೇವಪ್ಪ, ಪ್ರಶಾಂತ್, ಉಪನ್ಯಾಸಕಾರಾದ ಪರಮೇಶ ,ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್, ಮೈಸೂರು ಅಂಚಲ್ ಉಪಾಧ್ಯಕ್ಷರಾದ ಕುಂಟೆ ಗೌಡರು, ಆಡಿಯ ಯಜಮಾನ್ರುಗಳು, ಅಂಗನವಾಡಿ ಶಿಕ್ಷಕರಾದ ಅಕ್ಕಮ್ಮ,ಜಯಶೀಲಾ, ಸೋಮಶೇಖರ್, ಸ್ಥಳೀಯರಾದ ಮಲ್ಲಿಕಾರ್ಜುನ ಸ್ವಾಮಿ, ವನವಾಸಿ ಕಾರ್ಯಕರ್ತೆ ಹರ್ಷಿತಾ ಹಾಗೂ ಆಡಿಯಾ ಜನರು ಉಪಸ್ಥಿತರಿದ್ದರು.