Live Stream

[ytplayer id=’22727′]

| Latest Version 8.0.1 |

Local News

ಮಕ್ಕಳು ಅಕ್ಷರ ಜ್ಞಾನದೊಂದಿಗೆ ಲೋಕಜ್ಞಾನವನ್ನು ಕಲಿಯಬೇಕು; ಅಂಜಿನಪ್ಪ

ಮಕ್ಕಳು ಅಕ್ಷರ ಜ್ಞಾನದೊಂದಿಗೆ ಲೋಕಜ್ಞಾನವನ್ನು ಕಲಿಯಬೇಕು; ಅಂಜಿನಪ್ಪ
ಕೊಟ್ಟೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕೊಟ್ಟೂರು ಶಾಖೆಯವರು ಪಟ್ಟಣದ ಶಿವಾನಿ ಪ್ಯಾರಡೈಸ್ನಲ್ಲಿ ಆಯೋಜನೆ ಮಾಡಿದ್ದ ಕೊಟ್ಟೂರು ತಾಲೂಕು ಮಟ್ಟದ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ  ಪತ್ರಾಂಕಿತ ಉಪಖಜಾನಾಧಿಕಾರಿಗಳಾಸ ಅಂಜಿನಪ್ಪ ಇವರು ಭಾವಿ ಭವಿಷ್ಯದ ಕನಸನ್ನು ಕಾಣುತ್ತಿರುವ ವಿದ್ಯಾರ್ಥಿಗಳೇ ನಾನೂ ಸಹಾ ನಿಮ್ಮಂತೆ ಕನಸು ಕಂಡು ಅದನ್ನು ನನಸಾಗಿಸಲು ಪ್ರಯತ್ನಿಸಿ ಕೆಎಎಸ್ ಉತ್ತೀರ್ಣನಾಗಿ ಯಶಸ್ವಿಯಾಗಿದ್ದೇನೆ. ನೀವೆಲ್ಲರೂ ಜ್ಞಾನ ಸಂಪಾದಿಸುವುದರ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಸಹಾ ಕಲಿಯಬೇಕು. ಸಂಬಂಧಗಳು ದೂರಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸಂಬಂಧಗಳಿಗೆ ಬೆಲೆಕೊಡುತ್ತಾ ಬೆಸುಗೆಯಾಗಬೇಕು.  ಸಾಮಾಜದಲ್ಲಿ ಇನ್ನೊಬ್ಬರಿಗೆ ಸ್ಪೂರ್ತಿಯಾದರೆ ನಿಮ್ಮ ಬದುಕು ಸಾರ್ಥಕ ಎಂದು ಪ್ರೋತ್ಸಾಹದ ನುಡಿಗಳನ್ನು ನುಡಿದರು.
ಪ್ರಾಸ್ತಾವಿಕ ನುಡಿಗಳನ್ನು ನುಡಿದ ತಾಲೂಕು ಸಂಘದ ಅಧ್ಯಕ್ಷರಾದ ಯೋಗೀಶ್ವರ ದಿನ್ನೆಯವರು “ನಮ್ಮ ನೌಕರರ ಮಕ್ಕಳು ನಮ್ಮ ಹೆಮ್ಮೆ” ಎಂದು ಭಾವಿಸಿ ಶೇ.90ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಎಸ್ಎಸ್ಎಸ್ಎಲ್ಯ ಮತ್ತು ಪಿಯುಸಿಯ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ ಹಾಗಾಗಿ ಆ ಎಲ್ಲಾ ಮಕ್ಕಗಳನ್ನು ಗೌರವಿಸಲಾಗಿದೆ. ಜೊತೆಗೆ ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳು ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದರು. ಸನ್ಮಾನ ಮತ್ತು ಪುರಸ್ಕಾರಗಳಿಂದ ವ್ಯಕ್ತಿಯ ಜವಾಬ್ದಾರಿ ಜಾಸ್ತಿಯಾಗುತ್ತದೆ.  ಆ ಜವಾಬ್ದಾರಿಯನ್ನು ಅರಿತು ಜೀವದಲ್ಲಿ ಯಶಸ್ವಿ ಕಾಣಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಖಜಾಂಚಿ ವೀರೇಶ ತುಪ್ಪದ, ಕಾರ್ಯದರ್ಶಿ ರಮೇಶ ಕೆ, ಹಿರಿಯ ಉಪಾಧ್ಯಕ್ಷರಾದ ವೀರಣ್ಣ ಎ ಕೆ, ಉಪಾದ್ಯಕ್ಷ ಸಿದ್ದಪ್ಪ ಜಿ, ಸಾಂಸ್ಕೃತಿಕ ಕಾರ್ಯದರ್ಶಿ ಹೇಮಚಂದ್ರ, ಪದಾಧಿಕಾರಿಗಳಾದ ರವಿಕುಮಾರ, ಮೀನಾಕ್ಷಿ, ಚನ್ನೇಶಪ್ಪ.ಎಸ್ ಇದ್ದರು. ರಾಜ್ಯ ಪರಿಷತ್ ಸದಸ್ಯರಾದ ಎಸ್.ಎಂ.ಗುರುಬಸವರಾಜ ಹಾಗೂ ಜಂಟಿ ಕಾರ್ಯದರ್ಶಿ ಶಿವಕುಮಾರ್.ಎಂ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಮಂಜುನಾಥ.ಬಿ.ಟಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಶೇ.90 ಕ್ಕಿಂತ ಹೆಚ್ಚಿನ ಅಂಕದೊಂದಿಗೆ ಉತ್ತೀರ್ಣರಾದ 13 ಎಸ್ಎಸ್ಎಲ್ಸಿ ಹಾಗೂ 13 ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಫೈಲ್ನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಶೀಲಾ ಮಹಾದೇವ ಹರಿಪ್ರಿಯ ಭರತನಾಟ್ಯ ಶಾಲಾ ಮಕ್ಕಳ ಭರತನಾಟ್ಯ ಕಾರ್ಯಕ್ರಮದಲ್ಲಿ ಆಕರ್ಷಣೀಯವಾಗಿತ್ತು.
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";