ಹುಕ್ಕೇರಿ: ತಾಲೂಕಿನ ಮಾವನೂರ ಗ್ರಾಮದ ಸುತ್ತಲಿನ ಹಲವು ಗ್ರಾಮಗಳಲ್ಲಿ ಶನಿವಾರ ಗಾಳಿ, ಮಿಂಚು, ಗುಡುಗು, ಸಿಡಿಲು ಸಹಿತ ಧಾರಕಾರ ಮಳೆ ಸುರಿಯಿತು.
ಬೆಳಿಗ್ಗೆ ಬಿಸಿಲಿನ ತಾಪದಿಂದ ಜನರು ಸುಸ್ತಾಗಿದ್ದರು. ಸಂಜೆ ವೇಳೆಗೆ ರಭಸವಾಗಿ ಗಾಳಿ ಬೀಸತೊಡಗಿತು. ನಂತರ ಕೆಲ ಗಂಟೆಗಳ ಕಾಲ ವಿಪರೀತ ಮಳೆ ಸುರಿದಿದ್ದು ಬಿಸಿಲ ದಾಹದಿಂದ ದಣಿದಿದ್ದ ಭೂಮಿಗೆ ತಂಪೇರದಂತಾಗಿದೆ.