ಹುಕ್ಕೇರಿ: ತಾಲೂಕಿನ ಕುರಣಿ ಗ್ರಾಮದಲ್ಲಿ, ಮೇ 18. ರವಿವಾರದಂದು, ಶ್ರೀ ಗಂಗಾದೇವಿ ಪ್ರೌಢಶಾಲೆ ಕುರಣಿಯಲ್ಲಿ 2003-04 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ, ಗುರುವಂದನಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಗಂಗಾದೇವಿ ಮಠ ಕುರುಣಿಯ, ಬ್ರಹ್ಮಶ್ರೀ ಆನಂದ ಸ್ವಾಮಿಗಳು ಜಿ. ತವಗಮಠ ಇವರು ಮಾತನಾಡಿ, ಬಿ. ಬಿ. ವಿ ಸಂಸ್ಥೆಯು ಎಲ್ಲರಿಗೂ ಕಾಮಧೇನುವಾಗಿ ದೊರಕಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ದೊರಕಬೇಕು. ಅಜ್ಞಾನವನ್ನು ತೊರೆದು ಎಲ್ಲೆಲ್ಲೂ ಜ್ಞಾನವೇ ಬೆಳಗಬೇಕು. ಪ್ರತಿಯೊಬ್ಬರೂ ಇಲ್ಲಿ ಶಿಕ್ಷಣವನ್ನು ಪಡೆದು ಉನ್ನತ ಸ್ಥಾನಕ್ಕೇರಿ ಉನ್ನತ ಮಟ್ಟದಲ್ಲಿರಬೇಕು. ಎಲ್ಲರ ಜೀವನ ಪಾವನವಾಗಬೇಕು ಎಂದು ಆಶಿಸುತ್ತೇನೆ ಎಂದರು. ಶಿಕ್ಷಣದ ಬೇರು ಅತ್ಯಂತ ಕಹಿ ಆದರೆ, ಅದರ ಫಲ ಜೇನಿಗಿಂತಲೂ ಸಿಹಿ. ಯಾರೂ ಕದಿಯದ ವಸ್ತು ಶಿಕ್ಷಣ. ಹೀಗೆ ಎಲ್ಲರೂ ಒಗ್ಗಟ್ಟಾಗಿ ಈ ರೀತಿ ಗುರುವಂದನೆಯ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ, ಬಿ.ಬಿ.ವಿ ಸಂಘ ಕುರಣಿಯ ಚೇರ್ಮನ್ನರಾದ ಎಸ್. ಡಿ. ವಾಡೆನ್ನವರ, ಅತಿಥಿಗಳಾಗಿ ಆಗಮಿಸಿದಂತಹ ಶಾಲೆಯ ಹಿರಿಯ ಮುಖ್ಯ ಅಧ್ಯಾಪಕರು ಎ.ಜಿ. ವಾಘ, ಬಿ.ಎಸ್. ಡೋಳ್ಳಿ, ಪಿ. ಎಸ್. ಹತ್ತಿ, ಆರ್. ಎಂ. ಕಳಸ, ಶ್ರೀಮತಿ ಪಿ. ಎಚ್. ಯರಗಟ್ಟಿ, ಆರ್. ಎ. ಬಡಿಗೇರ್, ಎಸ್. ಸಿ. ಮಾನಗಾಂವಿ, ಕೆ. ಎಸ್. ಕರಗುಪ್ಪಿ, ಬಿ. ಎಂ. ಅಂಗಡಿ ಹಾಗೂ 2003-04 ನೇ ಸಾಲಿನ ವಿದ್ಯಾರ್ಥಿಗಳಾದ, ಸಾವಿತ್ರಿ ಹಿರೇಮಠ, ಸಿದ್ದಪ್ಪ ನಾಯಕ್, ಮಲ್ಲು ಬಾಗೇವಾಡಿ, ಮಹಾದೇವಿ ಪಾಟೀಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.